ಕರ್ನಾಟಕ

karnataka

ETV Bharat / bharat

ಹಿಮಾಚಲ ಪ್ರದೇಶ, ಸಿಕ್ಕಿಂನಲ್ಲಿ ಲಘು ಭೂಕಂಪ..

ಹಿಮಾಚಲ ಪ್ರದೇಶ, ಸಿಕ್ಕಿಂನ ರವಂಗ್ಲಾದಲ್ಲಿ ಇಂದು ನಸುಕಿನ ಜಾವ ಲಘು ಭೂಕಂಪನ ಸಂಭವಿಸಿರುವ ವರದಿಯಾಗಿದೆ.

Earthquake of magnitude 3.7 hits Sikkim's Ravangla
ಸಿಕ್ಕಿಂನಲ್ಲಿ ಲಘು ಭೂಕಂಪ.. 3.7 ರಷ್ಟು ತೀವ್ರತೆ ದಾಖಲು

By

Published : Jan 5, 2022, 6:49 AM IST

Updated : Jan 5, 2022, 9:35 AM IST

ದಕ್ಷಿಣ ಸಿಕ್ಕಿಂ: ಇತ್ತೀಚೆಗೆ ಆಗಾಗ ಭೂಕಂಪನದ ವರದಿಗಳು ಆಗುತ್ತಲೇ ಇವೆ. ಇಂದು ಬೆಳಗಿನ ಜಾವ ಸಿಕ್ಕಿಂನ ರವಂಗ್ಲಾದಲ್ಲೂ ಭೂಕಂಪ ಸಂಭವಿಸಿದೆ. ಭೂಕಂಪನದ ತೀವ್ರತೆ 3.7 ರಷ್ಟು ಇತ್ತು ಎಂದು ನ್ಯಾಷನಲ್​​ ಫಾರ್​ ಸಿಸ್ಮೋಲಾಜಿ ಮಾಹಿತಿ ನೀಡಿದೆ.

ಎನ್​​ಸಿಎಸ್​​ ನೀಡಿದ ಮಾಹಿತಿ ಅನ್ವಯ ಈ ಭೂಕಂಪನ ಭೂಮಿಯ 5 ಕಿ.ಮೀ ಆಳದಲ್ಲಿ ಸಂಭವಿಸಿದ್ದು, ರವಂಗ್ಲಾದ ಉತ್ತರ ಭಾಗದಲ್ಲಿ ತಡರಾತ್ರಿ ಮೂರು ಗಂಟೆ ಸಮಯದಲ್ಲಿ ಸಂಭವಿಸಿದೆ. ಈ ಸಂಬಂಧ ಎನ್​​ಸಿಎಸ್​ ಟ್ವೀಟ್​ ಮಾಡಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಇದನ್ನೂ ಓದಿ:ಸಾವಿರಾರು ಅನಾಥ ಮಕ್ಕಳ ತಾಯಿಯಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ

ಹಿಮಾಚಲದಲ್ಲಿ ಮತ್ತೊಮ್ಮೆ ಭೂಕಂಪ:ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.3ರಷ್ಟು ದಾಖಲಾಗಿದೆ ಎಂದು ಶಿಮ್ಲಾ ಹವಾಮಾನ ಕೇಂದ್ರ ಖಚಿತಪಡಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ ಚಂಬಾದಲ್ಲಿ ಮಂಗಳವಾರ ರಾತ್ರಿ 10.47ಕ್ಕೆ ಭೂಕಂಪ ಸಂಭವಿಸಿದೆ. ಆದರೆ, ಭೂಕಂಪದಿಂದ ಯಾವುದೇ ಹಾನಿಯಾಗಿಲ್ಲ. ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಭೂಕಂಪನದ ಅನುಭವವಾಗುತ್ತಿದೆ.

ಭೂವಿಜ್ಞಾನಿಗಳ ಪ್ರಕಾರ, ಹಿಮಾಚಲ ಪ್ರದೇಶವನ್ನು ಭೂಕಂಪದ ಅತ್ಯಂತ ಸೂಕ್ಷ್ಮ ವಲಯ 4 ಮತ್ತು ವಲಯ 5 ರಲ್ಲಿ ಸೇರಿಸಲಾಗಿದೆ. ಈ ವರ್ಷ 55 ಸಣ್ಣ ಮತ್ತು ದೊಡ್ಡ ಭೂಕಂಪಗಳು ಸಂಭವಿಸಿವೆ. ಇದು ಭೂಕಂಪಕ್ಕೆ ಸೂಕ್ಷ್ಮವಾಗಿರುವ ಐದನೇ ವಲಯದಲ್ಲಿದೆ.ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಸುಮಾರು 9 ಬಾರಿ ಭೂಮಿ ಕಂಪಿಸಿದೆ.

Last Updated : Jan 5, 2022, 9:35 AM IST

ABOUT THE AUTHOR

...view details