ತೇಜ್ಪುರ್ (ಅಸ್ಸೋಂ): ತೇಜ್ಪುರದಲ್ಲಿ ತಡರಾತ್ರಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದೆ. ಮಧ್ಯರಾತ್ರಿ 12:52 ರ ಸುಮಾರಿಗೆ 10 ಕಿಲೋಮೀಟರ್ ಭೂಮಿಯ ಆಳದಲ್ಲಿ ಕಂಪಿಸಿದೆ.
ಈ ಕುರಿತು ಭೂಕಂಪನಾ ಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದ್ದು, ಅಸ್ಸೋಂನ ತೇಜ್ಪುರದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ರಷ್ಟು ತೀವ್ರತೆ ದಾಖಲಾಗಿದೆ ಎಂದು ಉಲ್ಲೇಖಿಸಲಾಗಿದೆ.