ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಲಘು ಭೂಕಂಪನ.. ಫಿಲಿಫೈನ್ಸ್​ನಲ್ಲೂ 6.2 ತೀವ್ರತೆಯಲ್ಲಿ ನಲುಗಿದ ಭೂಮಿ - Earthquake in delhi

ನವದೆಹಲಿ ಮತ್ತು ಫಿಲಿಫೈನ್ಸ್‌ನಲ್ಲಿ ಇಂದು ಮುಂಜಾನೆ ಲಘು ಭೂಕಂಪನ ಸಂಭವಿಸಿದೆ. ಯಾವುದೇ ಆಸ್ತಿಪಾಸ್ತಿ ಹಾಗೂ ಪ್ರಾಣಾಪಾಯದ ವರದಿಯಾಗಿಲ್ಲ..

Earthquake of magnitude 2.3 on the Richter scale hit  in delhi
ದೆಹಲಿಯಲ್ಲಿ ಲಘು ಭೂಕಂಪನ

By

Published : Dec 25, 2020, 6:42 AM IST

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದೆ. ಚಳಿಯ ಜೊತೆ ದೆಹಲಿಗರಿಗೆ ಭೂಕಂಪನದ ಅನುಭವವೂ ಆಗಿದೆ.

ದೆಹಲಿಯ ನಂಗೋಲಿ ಭಾಗದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 2.3ರಷ್ಟು ತೀವ್ರತೆ ದಾಖಲಲಾಗಿದೆ. ಇಂದು ಮುಂಜಾನೆ 5 ಗಂಟೆ 2 ನಿಮಿಷದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್​ ಫಾರ್​​ ಸಿಸ್ಮೋಲಜಿ ಮಾಹಿತಿ ನೀಡಿದೆ. ಈವರೆಗೆ ಯಾವುದೇ ಆಸ್ತಿ-ಪಾಸ್ತಿ ನಷ್ಟ ಹಾಗೂ ಪ್ರಾಣಾಪಾಯದ ವರದಿಯಾಗಿಲ್ಲ.

ಫಿಲಿಫೈನ್ಸ್​ನಲ್ಲೂ ಭೂಕಂಪನ :ಫಿಲಿಫೈನ್ಸ್​ನ ಮನಿಲಾದಲ್ಲಿ 6.2 ತೀವ್ರತೆಯ ಭೂಕಂಪನವಾಗಿದೆ. ಇಂದು ಮುಂಜಾನೆ 5:13ರ ವೇಳೆ ಭೂಕಂಪನ ಸಂಭವಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details