ಕರ್ನಾಟಕ

karnataka

ETV Bharat / bharat

ಇಂಡೋನೇಷ್ಯಾದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪ - ಇಂಡೋನೇಷ್ಯಾದಲ್ಲಿ ಪ್ರಭಲ ಭೂಕಂಪ

ಇತ್ತೀಚಿನ ದಿನಗಳಲ್ಲಿ ಪಸಮನ್ ಜಿಲ್ಲೆ ಮತ್ತು ಪಸಮನ್ ಬರತ್ ಜಿಲ್ಲೆಗಳಲ್ಲಿ ಭೂಕಂಪನಗಳು ಹೆಚ್ಚಾಗುತ್ತಿದ್ದು, ಹಾನಿಗಳು ಸಂಭವಿಸುತ್ತಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸ್ಥಳಾಂತರಗೊಂಡ ಜನರು ಈಗ 35ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳಲ್ಲಿದ್ದಾರೆ..

ಭೂಕಂಪ
ಭೂಕಂಪ

By

Published : Apr 5, 2022, 4:17 PM IST

ಜಕಾರ್ತ(ಇಂಡೋನೇಷ್ಯಾ) :ಇಂಡೋನೇಷ್ಯಾದ ಪೂರ್ವ ಪ್ರಾಂತ್ಯದ ಉತ್ತರ ಮಲುಕುದಲ್ಲಿ ಇಂದು ಮುಂಜಾನೆಯ ವೇಳೆ 6.0 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ.

ಇದುವರೆಗೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ಫೆಬ್ರವರಿಯಲ್ಲಿ, ಇಂಡೋನೇಷ್ಯಾದ ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಪರಿಣಾಮ ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದರು. ಸುಮಾರು 13,000 ಜನರನ್ನು ಅಲ್ಲಿಂದ ಸ್ಥಳಾಂತರಗೊಳಿಸಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಪಸಮನ್ ಜಿಲ್ಲೆ ಮತ್ತು ಪಸಮನ್ ಬರತ್ ಜಿಲ್ಲೆಗಳಲ್ಲಿ ಭೂಕಂಪನಗಳು ಹೆಚ್ಚಾಗುತ್ತಿದ್ದು, ಹಾನಿಗಳು ಸಂಭವಿಸುತ್ತಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸ್ಥಳಾಂತರಗೊಂಡ ಜನರು ಈಗ 35ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳಲ್ಲಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳಿಗೆ ಕೆಲವು ತುರ್ತು ಪರಿಹಾರ ನೆರವು ನೀಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details