ಕರ್ನಾಟಕ

karnataka

ETV Bharat / bharat

ಅಂಡಮಾನ್​-ನಿಕೋಬಾರ್​ನಲ್ಲಿ ಭೂಕಂಪನ: ರಿಕ್ಟರ್​ ಮಾಪಕದಲ್ಲಿ 3.9 ತೀವ್ರತೆ ದಾಖಲು - ಪೋರ್ಟ್ ಬ್ಲೇರ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಆಗಾಗ್ಗೆ ಭೂಕಂಪನಕ್ಕೆ ಒಳಗಾಗುತ್ತವೆ. ಇದೀಗ ಮಂಗಳವಾರ ರಾತ್ರಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್​ಸಿಎಸ್) ತಿಳಿಸಿದೆ.

Earthquake
ಭೂಕಂಪನ

By

Published : Sep 22, 2021, 7:32 AM IST

ಪೋರ್ಟ್​​​​ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್​​​ಬ್ಲೇರ್ ಬಳಿ ಮಂಗಳವಾರ ರಾತ್ರಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್​ಸಿಎಸ್) ತಿಳಿಸಿದೆ. ರಾತ್ರಿ 11:45 ರ ಸುಮಾರಿಗೆ 10 ಕಿಲೋಮೀಟರ್ ಆಳದಲ್ಲಿ ಕಂಪನ ಅನುಭವವಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಆಗಾಗ್ಗೆ ಭೂಕಂಪನಕ್ಕೆ ಒಳಗಾಗುತ್ತವೆ. ಈ ಹಿಂದೆ ಸೆಪ್ಟೆಂಬರ್ 11 ರಂದು, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆಯ ಭೂಕಂಪನ ಸಂಭವಿಸಿತ್ತು.

ಇನ್ನು ಕಳೆದ ದಿನ ರಷ್ಯಾದ ಕುರಿಲ್​ ಐಲ್ಯಾಂಡ್​ನಲ್ಲಿ 6.1ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ಜೊತೆಗೆ ಜಪಾನ್​ನ ಟೋಕಿಯೋದಲ್ಲೂ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ಹೇಳಿತ್ತು.

ಆಸ್ಟ್ರೇಲಿಯಾದಲ್ಲಿ ಭೂಕಂಪನ:

ಇನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಮೌಂಟ್ ಬುಲ್ಲರ್‌ನಿಂದ ದಕ್ಷಿಣಕ್ಕೆ 38 ಕಿ.ಮೀ ದೂರದಲ್ಲಿ 5.8 ತೀವ್ರತೆಯ ಭೂಕಂಪವು ಸಂಭವಿಸಿದೆ. ಮಂಗಳವಾರ ರಾತ್ರಿ 11.15ರ ಸುಮಾರಿಗೆ ಭೂಮಿ ನಡುಗಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೇ (ಯುಎಸ್‌ಜಿಎಸ್) ಹೇಳಿದೆ.

ABOUT THE AUTHOR

...view details