ಚಮೋಲಿ, ಉತ್ತರಾಖಂಡ:ಚಮೋಲಿಯಲ್ಲಿ ಭೂಕಂಪದ ಅನುಭವವಾಗಿದೆ. ಭೂಕಂಪನ ಹಿನ್ನೆಲೆ ಜನರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆಯು 2.8 ರಷ್ಟಿದೆ ಎಂದು ತಿಳಿದು ಬಂದಿದೆ. ಭೂಕಂಪವು ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ, ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಗಡಿನಾಡಿನ ಜಿಲ್ಲಾ ಕೇಂದ್ರವಾದ ಪಿಥೋರಗಢದಲ್ಲಿ ಹಿಂದಿನ ದಿನವೂ ಭೂಕಂಪನದ ಅನುಭವವಾಗಿತ್ತು. ಪಿಥೋರಗಢ್ನಲ್ಲಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ 2.7 ರಷ್ಟಿದೆ. ಆದ್ರೆ ಜಿಲ್ಲೆಯಲ್ಲಿ ಎಲ್ಲಿಯೂ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕಂಪನದ ಅನುಭವವಾದ ಕೂಡಲೇ ಜನರು ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಇಂದು ಮತ್ತೆ ಬೆಳಗ್ಗೆ 10.37ಕ್ಕೆ ಉತ್ತರಾಖಂಡದ ಚಮೋಲಿಯಲ್ಲಿ ಭೂಕಂಪದ ಅನುಭವವಾಗಿದೆ. ಕಂಪನದ ಅನುಭವವಾದ ಕೂಡಲೇ ಜನರು ಮನೆಯಿಂದ ಹೊರಬಂದಿದ್ದಾರೆ. ಇನ್ನು ಭೂಕಂಪದ ತೀವ್ರತೆಯು 2.8 ರಷ್ಟು ದಾಖಲಾಗಿದ್ದು, ಯಾವುದೇ ಹಾನಿಯ ಬಗ್ಗೆ ವರದಿ ಆಗಿಲ್ಲ.
ಉತ್ತರಾಖಂಡ ಅತ್ಯಂತ ಸೂಕ್ಷ್ಮ ವಲಯ: ಭೂವಿಜ್ಞಾನಿಗಳ ಪ್ರಕಾರ ಉತ್ತರಾಖಂಡವನ್ನು ಭೂಕಂಪದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ವಲಯವೆಂದು ಪರಿಗಣಿಸಲಾಗಿದೆ. ಈ ಹಿಂದೆ ಉತ್ತರಕಾಶಿ ಮತ್ತು ಚಮೋಲಿಯಲ್ಲಿ ಸಂಭವಿಸಿದ ಭೂಕಂಪದಿಂದ ಆಗಿರುವ ಹಾನಿಯನ್ನು ಇಂದಿಗೂ ಜನ ಮರೆತಿಲ್ಲ. ಇಂದಿಗೂ ಆ ದೃಶ್ಯವನ್ನು ನೆನೆದು ಜನ ಕಣ್ಣೀರಿಡುತ್ತಾರೆ.