ಕರ್ನಾಟಕ

karnataka

ETV Bharat / bharat

ಉತ್ತರಾಖಂಡ್​ನ ಉತ್ತರಕಾಶಿಯಲ್ಲಿ ಮಧ್ಯರಾತ್ರಿ ಕಂಪಿಸಿದ ಭೂಮಿ

ಉತ್ತರಾಖಂಡ್​ನಲ್ಲಿ ಕಂಪಿಸಿದ ಭೂಮಿ- ರಿಕ್ಟರ್​ ಮಾಪಕದಲ್ಲಿ 3.1 ತೀವ್ರತೆ ದಾಖಲು- 10 ದಿನದ ಅಂತರದಲ್ಲಿ ಎರಡನೇ ಬಾರಿ ಘಟನೆ

ಉತ್ತರಾಖಂಡ್​ನ ಉತ್ತರಕಾಶಿಯಲ್ಲಿ ಮಧ್ಯರಾತ್ರಿ ಕಂಪಿಸಿದ ಭೂಮಿ
earthquake-in-uttarkashi-uttarakhand-at-midnight

By

Published : Dec 28, 2022, 10:09 AM IST

ಉತ್ತರಕಾಶಿ:ಉತ್ತರಾಖಂಡ್​ದಲ್ಲಿ 10 ದಿನಗಳ ಅಂತರದಲ್ಲಿ ಎರಡನೇ ಬಾರಿ ಮತ್ತೆ ಭೂಕಂಪನ ಸಂಭವಿಸಿದೆ ಉತ್ತರ ಕಾಶಿಯಲ್ಲಿ ನಿನ್ನೆ ಮಧ್ಯರಾತ್ರಿ ಭೂಮಿ ಕಂಪಿಸಿದೆ. ಮಧ್ಯರಾತ್ರಿ ಸುಮಾರು 2. 19ಕ್ಕೆ ಭೂ ಕಂಪನ ಆಗಿದ್ದು, ರಿಕ್ಟರ್​ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದೆ.

ಮಧ್ಯರಾತ್ರಿ ಭೂ ಕಂಪನ: ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅನುಸಾರ ಉತ್ತರ ಕಾಶಿಯಲ್ಲಿ ರಿಕ್ಟರ್​ ಮಾಪಕದ ಅನುಸಾರ 3.1 ರ ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರಬಿಂದು ಅಕ್ಷಾಂಶ 30.87 ಮತ್ತು ರೇಖಾಂಶ 78.19 ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ವರದಿ ಮಾಡಿದೆ. ಭೂಕಂಪದ ಆಳವು 5 ಕಿ.ಮೀ ಇದ್ದು, ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ, ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿ ಆಗಿಲ್ಲ.

ನೇಪಾಳದಲ್ಲಿ ಎರಡು ಬಾರಿ ಭೂಕಂಪನ:ಇನ್ನು, ನೆರೆಯ ನೇಪಾಳದಲ್ಲಿ ನಿನ್ನೆ ರಾತ್ರಿ ಎರಡು ಬಾರಿ ಭೂಮಿ ಕಂಪಿಸಿದೆ. ರಾತ್ರಿ ಸ್ಥಳೀಯ ಕಾಲಮಾನ ಅನುಸಾರ 1 ಮತ್ತು 2 ಗಂಟೆಗೆ ಭೂಮಿ ಕಂಪಿಸಿದೆ. ರಿಕ್ಟರ್​​ ಮಾಪಕದಲ್ಲಿ 4.7 ಮತ್ತು 5.3 ದಾಖಲಾಗಿದೆ.

ವಲಯ ಐದರಲ್ಲಿ ಉತ್ತರಕಾಶಿ: ಉತ್ತರಾಖಂಡದ ಪಿತೋರಗಢ, ಬಾಗೇಶ್ವರ, ಉತ್ತರಕಾಶಿ, ಚಮೋಲಿ ಮತ್ತು ರುದ್ರಪ್ರಯಾಗ ಜಿಲ್ಲೆಗಳು ವಲಯ 5ರ ಅಡಿಯಲ್ಲಿ ಬರುತ್ತವೆ. ಭೂಕಂಪನ ಕೇಂದ್ರೀಕೃತವಾಗಿರುವ ಪ್ರದೇಶವನ್ನು ವಿವರಿಸಲು ಭೂಕಂಪನ ವಲಯವನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಸ್ಟೌನಿಂದ ಸುಟ್ಟು ಭಸ್ಮವಾದ ಮನೆ: ಒಂದೇ ಕುಟುಂಬದ ಐವರು ಸಜೀವ ದಹನ

ABOUT THE AUTHOR

...view details