ಕರ್ನಾಟಕ

karnataka

ETV Bharat / bharat

3 ಗಂಟೆ ಅಂತರದಲ್ಲಿ 2 ರಾಜ್ಯಗಳಲ್ಲಿ ಭಾರಿ ಭೂಕಂಪ...! - ಭೂಕಂಪನ

ದೇಶದ ಎರಡು ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಾಜಸ್ಥಾನದಲ್ಲಿ 5.3 ತೀವ್ರತೆ ದಾಖಲಾಗಿದೆ.

Earthquake in Rajasthan Bikaner, Earthquake in  Meghalaya West Garo Hills, Earthquake, Earthquake news, Earthquake latest news, ರಾಜಸ್ಥಾನದ ಬಿಕಾನೇರ್​ದಲ್ಲಿ ಭೂಕಂಪ, ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್​ನಲ್ಲಿ ಭೂಕಂಪ, ಭೂಕಂಪ ಸುದ್ದಿ, ಭೂಕಂಪನ,
3 ಗಂಟೆಯ ಅಂತರದಲ್ಲಿ 2 ರಾಜ್ಯಗಳಲ್ಲಿ ಭಾರೀ ಭೂಕಂಪ

By

Published : Jul 21, 2021, 7:46 AM IST

ನವದೆಹಲಿ:ಎರಡು ರಾಜ್ಯಗಳಲ್ಲಿ ಮೂರು ಗಂಟೆಯ ಅಂತರದಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. ರಾಜಸ್ಥಾನದ ಬಿಕಾನೇರ್​ ಮತ್ತು ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ.

ಮೇಘಾಲಯದಲ್ಲಿ ನಡುಗಿದ ಭೂಮಿ:ಇಲ್ಲಿನ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ 2:10 ಗಂಟೆಗೆ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS​) ಮಾಹಿತಿ ನೀಡಿದೆ.

ರಾಜಸ್ಥಾನದಲ್ಲಿ ಭಾರೀ ಭೂಕಂಪ:ಇಲ್ಲಿನ ಬಿಕಾನೇರ್​ದಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿರಬಹುದಾಗಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಪ್ರಕಾರ, ಇಂದು ಬೆಳ್ಳಂಬೆಳಗ್ಗೆ 5:24 ಗಂಟೆಗೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ ಎಂದು ಹೇಳಿದೆ.

ಒಟ್ಟಿನಲ್ಲಿ ಮೂರು ಗಂಟೆಗಳ ಅಂತರದಲ್ಲಿ ದೇಶದ ಎರಡು ರಾಜ್ಯದಲ್ಲಿ ಭೂಕಂಪನ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ABOUT THE AUTHOR

...view details