ಕರ್ನಾಟಕ

karnataka

ETV Bharat / bharat

ಉತ್ತರಪ್ರದೇಶ ಬಳಿಕ ರಾಜಸ್ಥಾನದಲ್ಲಿ 4.1 ತೀವ್ರತೆಯ ಭೂಕಂಪನ

ರಾಜಸ್ಥಾನದ ಬಿಕನೇರ್​ನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ ಇದರ ಪ್ರಮಾಣ 4.1 ರಷ್ಟಿತ್ತು.

earthquake-in-rajasthan
ಭೂಕಂಪನ

By

Published : Aug 22, 2022, 11:37 AM IST

ಬಿಕಾನೇರ್(ರಾಜಸ್ಥಾನ):2 ದಿನಗಳ ಹಿಂದಷ್ಟೇ ಉತ್ತರಪ್ರದೇಶದಲ್ಲಿ ಭೂಮಿ ಕಂಪಿಸಿದ ಬಳಿಕ ಇದೀಗ ರಾಜಸ್ಥಾನದ ಬಿಕನೇರ್​ನಲ್ಲಿ ನಡುಕ ಕಂಡುಬಂದಿದೆ. ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ. ಈವರೆಗೂ ಯಾವುದೇ ಪ್ರಾಣ, ಆಸ್ತಿ ಹಾನಿ ಬಗ್ಗೆ ವರದಿಯಾಗಿಲ್ಲ.

ಬಿಕನೇರ್​ ಸುತ್ತಮತ್ತಲಿನ 236 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, 10 ಕಿಮೀ ಆಳದಿಂದ ಕಂಪನಗಳು ಉಂಟಾಗಿವೆ. ರಾತ್ರಿ 2 ಗಂಟೆ ಸುಮಾರಿನಲ್ಲಿ ಜನರು ನಿದ್ರೆಯಲ್ಲಿದ್ದಾಗ ಭೂಮಿ ನಡುಗಿದೆ.

ಶನಿವಾರದಂದು ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಭೂಮಿ ಕಂಪಿಸಿತ್ತು. ರಿಕ್ಟರ್​ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿತ್ತು. ಭೂಮಿಯಿಂದ 82 ಕಿಮೀ ಆಳದಲ್ಲಿ ಕಂಪನಗಳು ಎದ್ದಿದ್ದವು.

ಇದನ್ನೂ ಓದಿ:ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: 22 ಶಾಲೆಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಣೆ

ABOUT THE AUTHOR

...view details