ನವದೆಹಲಿ:ಇಂದು ಮಧ್ಯಾಹ್ನ 2:53ರ ಸುಮಾರಿಗೆ ಲಡಾಖ್, ಕಾರ್ಗಿಲ್ನ ವಿವಿಧೆಡೆ ಲಘು ಭೂಕಂಪನ ಉಂಟಾಗಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ ಪ್ರಕಾರ ರಿಕ್ಟರ್ ಮಾಪಕದಲ್ಲಿ 4.2ರ ತೀವ್ರತೆ ದಾಖಲಾಗಿದೆ.
ಲಡಾಖ್, ಕಾರ್ಗಿಲ್ನಲ್ಲಿ 4.2 ತೀವ್ರತೆಯ ಲಘು ಭೂಕಂಪನ
ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಕಾರ್ಗಿಲ್ ಪ್ರದೇಶದಲ್ಲಿ ಲಘು ಭೂಕಂಪನ ಉಂಟಾಗಿದೆ.
ಲಘು ಭೂಕಂಪನ
ಜಮ್ಮು- ಕಾಶ್ಮೀರದಿಂದ ಬೇರ್ಪಟ್ಟು ಹೊಸದಾಗಿ ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ಅಲ್ಲದೇ, ಕಾರ್ಗಿಲ್ ಪ್ರದೇಶದ ಸುತ್ತಲಿನ 195 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಈವರೆಗೂ ಯಾವುದೇ ಸಾವು ನೋವು, ನಷ್ಟದ ಬಗ್ಗೆ ವರದಿಗಳು ಬಂದಿಲ್ಲ.
ಇದನ್ನೂ ಓದಿ:ರಾಣಾ ದಂಪತಿಗೆ 14 ದಿನಗಳ ನ್ಯಾಯಾಂಗ ಬಂಧನ