ಕರ್ನಾಟಕ

karnataka

ETV Bharat / bharat

ಚಮೋಲಿಯಲ್ಲಿ ಭೂಕಂಪನ: 4.6ರಷ್ಟು ತೀವ್ರತೆ ದಾಖಲು - ಜೋಶಿಮಠದಲ್ಲಿ ಭೂಕಂಪನ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಪ್ರಬಲ ಭೂಕಂಪವಾಗಿದ್ದು, ಯಾವುದೇ ಪ್ರಾಣಹಾನಿ, ಆಸ್ತಿಪಾಸ್ತಿಯ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ.

earthquake in joshimath chamoli
ಚಮೋಲಿಯಲ್ಲಿ ಭೂಕಂಪನ: 4.6ರಷ್ಟು ತೀವ್ರತೆ ದಾಖಲು

By

Published : Sep 11, 2021, 8:58 AM IST

ಜೋಶಿಮಠ(ಉತ್ತರಾಖಂಡ):ಭೀಕರ ಹಿಮಪಾತ ಜರುಗಿದ್ದ ಚಮೋಲಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಜೋಶಿಮಠದಿಂದ ಸುಮಾರು 31 ಕಿಲೋಮೀಟರ್​ ದೂರದಲ್ಲಿ, ಐದು ಕಿಲೋಮೀಟರ್ ಆಳದಲ್ಲಿ ಬೆಳಗ್ಗೆ 5.58ಕ್ಕೆ ಭೂಮಿ ನಡುಗಿದ ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.

ಉತ್ತರಾಖಂಡದಲ್ಲಿನ ಅಪರೂಪದ ಭೌಗೋಳಿಕತೆಯಿಂದಾಗಿ ಭೂಕಂಪನಗಳು ಮತ್ತು ಹಿಮಪಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಈಗ ಸಂಭವಿಸಿದ ಭೂಕಂಪದಿಂದ ಯಾವುದೇ ಪ್ರಾಣ ಮತ್ತು ಆಸ್ತಿ ನಷ್ಟವಾಗಿಲ್ಲ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:ಸೇನಾ ವಿಮಾನ ಪತನ.. ಮೂವರು ಅಧಿಕಾರಿಗಳು ಸಾವು

ABOUT THE AUTHOR

...view details