ಪೋರ್ಟ್ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್) : ಶನಿವಾರ ರಾತ್ರಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು 69 ಕಿ.ಮೀ ಆಳದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ. ಇದಕ್ಕೂ ಮುನ್ನ ಜುಲೈ 9 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕ್ಯಾಂಪ್ಬೆಲ್ ಕೊಲ್ಲಿಯ ಆಗ್ನೇಯಕ್ಕೆ ರಾತ್ರಿ 7:39ಕ್ಕೆ 5.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಕೇಂದ್ರ ಬಿಂದು 70 ಕಿ.ಮೀ ಆಳದಲ್ಲಿತ್ತು ಎಂದು ತಿಳಿದುಬಂದಿದೆ.
ಏಪ್ರಿಲ್ ತಿಂಗಳಲ್ಲಿ ಒಂದೇ ದಿನ 6 ಬಾರಿ ಕಂಪನ:ಕಳೆದ ಏಪ್ರಿಲ್ 10 ರಂದುಮಧ್ಯಾಹ್ನದಿಂದ, ನಸುಕಿನ ಜಾವದವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 6 ಬಾರಿ ಭೂಮಿ ಕಂಪಿಸಿತ್ತು, ಭೂಕಂಪನದಿಂದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು.
ಇಲ್ಲಿನ ಕ್ಯಾಂಪ್ಬೆಲ್ ಕೊಲ್ಲಿಯಲ್ಲಿ ನಸುಕಿನ ಜಾವ 2.26 ಗಂಟೆಯ ಸುಮಾರಿಗೆ ಭೂಮಿ ಕಂಪಿಸಿತ್ತು. ಕ್ಯಾಂಪ್ಬೆಲ್ ಕೊಲ್ಲಿಯ ಉತ್ತರದಿಂದ 220 ಕಿಲೋ ಮೀಟರ್ ದೂರದಲ್ಲಿ ಕೇಂದ್ರ ಬಿಂದು ಪತ್ತೆಯಾಗಿತ್ತು. 32 ಕಿ.ಮೀ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಶೇ. 4.6ರಷ್ಟು ತೀವ್ರತೆಯ ಕಂಪನ ಉಂಟಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ತಿಳಿಸಿತ್ತು.