ಕಠ್ಮಂಡು/ನವದೆಹಲಿ: ನೇಪಾಳದಲ್ಲಿ ಇಂದು ಮುಂಜಾನೆ ಭಾರಿ ಪ್ರಮಾಣದ ಎರಡು ಭೂಕಂಪನ ಸಂಭವಿಸಿದೆ. ಪಶ್ಚಿಮ ನೇಪಾಳದ ದೋಟಿ ಜಿಲ್ಲೆಯಲ್ಲಿ 6.6 ತೀವ್ರತೆಯ ಭೂಕಂಪ ವರದಿಯಾಗಿದ್ದು, ಮನೆ ಕುಸಿದು 6 ಮಂದಿ ಅಸುನೀಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮೂರು ಬಾರಿ ಭೂಕಂಪನವಾದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರ (ಎನ್‌ಎಸ್‌ಸಿ) ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿ 9:07 ಕ್ಕೆ (ಸ್ಥಳೀಯ ಕಾಲಮಾನ) 5.7 ತೀವ್ರತೆಯ ಮೊದಲ ಭೂಕಂಪನ ದಾಖಲಾಯಿತು. ನಂತರ ರಾತ್ರಿ 9:56 ಕ್ಕೆ (ಸ್ಥಳೀಯ ಕಾಲಮಾನ) 4.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇಂದು ಮುಂಜಾನೆ 2:12 AM (ಸ್ಥಳೀಯ ಕಾಲಮಾನ) ಸುಮಾರಿಗೆ 6.6 ತೀವ್ರತೆಯ ಮೂರನೇ ಕಂಪನ ಉಂಟಾಗಿದೆ.
10 ಕಿಮೀ ಆಳದಲ್ಲಿ ಭೂಕಂಪನ ಆಳದ ಕೇಂದ್ರವನ್ನು ಗುರುತಿಸಲಾಗಿದೆ. ಸುಮಾರು 81.06 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರದ ತಜ್ಞರು ತಿಳಿಸಿದ್ದಾರೆ. ಭೂಕಂಪನದಿಂದ ಬೆಚ್ಚಿಬಿದ್ದಿ ಜನತೆ ಮನೆಗಳು, ಕಟ್ಟಡಗಳಿಂದ ಹೊರಗೆ ಓಡಿಬಂದು ರಸ್ತೆಯಲ್ಲಿ ನಿಂತಿದ್ದು ದೃಶ್ಯ ಸಾಮಾನ್ಯವಾಗಿತ್ತು.