ಕರ್ನಾಟಕ

karnataka

ETV Bharat / bharat

ಗುಜರಾತ್​​, ಮಹಾರಾಷ್ಟ್ರದಲ್ಲಿ ಲಘು ಭೂಕಂಪನ!

ಗುಜರಾತ್​ನ ಕಚ್​ ಹಾಗೂ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

earthquake hits Gujarat & Maharashtra
ಗುಜರಾತ್​​, ಮಹಾರಾಷ್ಟ್ರದಲ್ಲಿ ಲಘು ಭೂಕಂಪನ

By

Published : Jul 1, 2021, 9:35 AM IST

ಕಚ್‌/ಪಾಲ್ಘರ್: ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಲಘು ಭೂಕಂಪನ ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್​ಸಿಎಸ್​) ಮಾಹಿತಿ ನೀಡಿದೆ. ಈ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ, ಆಸ್ತಿ-ಪಾಸ್ತಿ ನಷ್ಟ ವರದಿಯಾಗಿಲ್ಲ.

ಇಂದು ಬೆಳಗ್ಗೆ 4.52 ಮತ್ತು 6.06ಕ್ಕೆ ಗುಜರಾತ್​ನ ಕಚ್​ ಜಿಲ್ಲೆಯಲ್ಲಿ 3.1 ಮತ್ತು 1.3 ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಕಚ್​ನ ರಾಪರ್​ ಪ್ರದೇಶದಿಂದ 15 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ.

ಇದನ್ನೂ ಓದಿ: ಟ್ವಿಟರ್​​ನಲ್ಲಿರುವ ಎಲ್ಲಾ ಅಶ್ಲೀಲ ವಿಷಯಗಳನ್ನು ತಕ್ಷಣವೇ ತೆಗೆಯಿರಿ: NCW ತಾಕೀತು

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಉಂಟಾದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 3.6ರಷ್ಟು ತೀವ್ರತೆಯಿದ್ದು, ಬೆಳಗ್ಗೆ 7.07ಕ್ಕೆ ಸಂಭವಿಸಿದೆ ಎಂದು ಎನ್​ಸಿಎಸ್ ತಿಳಿಸಿದೆ.

ABOUT THE AUTHOR

...view details