ಆರ್‌ಒಪಿ (ರೆಟಿನೋಪತಿ ಆಫ್ ಪ್ರಿಮೆಚುರಿಟಿ) ತರಹದ ಕಾಯಿಲೆಗಳು ಕಣ್ಣಿನ ದೃಷ್ಠಿಗೆ ಸಾಕಷ್ಟು ಹಾನಿ ಉಂಟುಮಾಡುತ್ತವೆ. ವಯಸ್ಕರಲ್ಲಿ ಸಾಮಾನ್ಯ ದೃಷ್ಟಿ ಪಕ್ವತೆಯ ವೈಫಲ್ಯವನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ, ಬಾಲ ಕುರುಡುತನಕ್ಕೆ ಬಾಲ್ಯಾವಸ್ಥೆಯಲ್ಲೇ ಚಿಕಿತ್ಸೆ ನೀಡುವ ತುರ್ತು ಇದೆ.
ಇದು ವಯಸ್ಕರಿಗೆ ಅಗತ್ಯವಾಗಿ ಅನ್ವಯಿಸುವುದಿಲ್ಲ. ರೆಟಿನೋಬ್ಲಾಸ್ಟೊಮಾ (ಕಣ್ಣಿನ ಕ್ಯಾನ್ಸರ್) ಅನ್ನು ಸಹ ಆರಂಭದಲ್ಲೇ ಕಂಡುಹಿಡಿಯಬೇಕು ಮತ್ತು ಮೊದಲೇ ಚಿಕಿತ್ಸೆ ನೀಡಬೇಕಾಗುತ್ತದೆ. ರೆಟಿನೋಬ್ಲಾಸ್ಟೊಮಾದ ಆರಂಭಿಕ ಲಕ್ಷಣಗಳೆಂದರೆ ಕಣ್ಣೀರು, ಕಣ್ಣು ಕೆಂಪಾಗುವುದು, ಮುಂತಾದ ರೋಗ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳಬಹುದು. ನೇತ್ರಶಾಸ್ತ್ರಜ್ಞರಿಂದ ಸಂಪೂರ್ಣ ಕಣ್ಣಿನ ಪರೀಕ್ಷೆಯಿಂದ ಮಾತ್ರ ಇದನ್ನು ಕಂಡುಹಿಡಿಯಬಹುದು.
ಆದ್ದರಿಂದ, ಯಾವುದೇ ಸೌಮ್ಯ ಲಕ್ಷಣಗಳಿದ್ದರೂ ಸಹ ಪ್ರಮಾಣೀಕೃತ ವೈದ್ಯರಿಂದ ತಪಾಸಣೆ ಮಾಡುವುದು ಯಾವಾಗಲೂ ಉತ್ತಮ. ಆಗ ಸರಳ ವಕ್ರೀಕಾರಕ ದೋಷಗಳಂತಹ ಇತರ ಸಮಸ್ಯೆಗಳನ್ನು ಸಹ ಆರಂಭದಲ್ಲಿಯೇ ಪತ್ತೆ ಹಚ್ಚಬಹುದು ಮತ್ತು ಸಮಯಕ್ಕೆ ಸರಿಯಾಗಿ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಜೀವನಪೂರ್ತಿ ದೃಷ್ಠಿದೋಷ ಎದುರಿಸಬೇಕಾಗುತ್ತೆ.
ದುರದೃಷ್ಟವಶಾತ್, ಈ ಸಮಸ್ಯೆಗಳು ಯಾವುದೇ ಪ್ರಮುಖ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ ಮತ್ತು ಚಿಕ್ಕ ಮಕ್ಕಳು ದೃಷ್ಟಿ ಮಂದವಾಗುವುದರ ಬಗ್ಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಸರಿಯಾದ ವಯಸ್ಸಿನಲ್ಲಿ ತಪಾಸಣೆ ಮಾಡುವುದು ಮತ್ತು ಅವರ ದೃಷ್ಟಿ ಸರಿಯಿದೆಯೇ ಖಚಿತಪಡಿಸಿಕೊಳ್ಳುವುದು ಪೋಷಕರ ಜವಾಬ್ದಾರಿ. ಆದ್ದರಿಂದ, ಪ್ರತಿ ಮಗುವಿಗೆ 1 ವರ್ಷಕ್ಕಿಂತ ಮೊದಲು ಕನಿಷ್ಠ ಒಂದು ಬಾರಿ ಕಣ್ಣಿನ ತಪಾಸಣೆ ನಡೆಸಬೇಕು ಮತ್ತು ನಂತರ 3-4 ವರ್ಷ ವಯಸ್ಸಿನಲ್ಲಿ ಮತ್ತು ವರ್ಷಕ್ಕೊಮ್ಮೆ 15 ವರ್ಷದವರೆಗೆ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಬೇಕು.
ಕುರುಡುತನವನ್ನು ಹೇಗೆ ತಡೆಯಬಹುದು..
ಕುರುಡುತನಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ..
- ಸಾಂಪ್ರಾದಾಯಿಕ ಔಷಧಿ ಬಳಕೆ- ದಡಾರ ಮತ್ತು ವಿಟಮಿನ್ ಎ ಕೊರತೆಯಿಂದಾಗಿ ಕಾರ್ನಿಯಲ್ ಸೋಂಕು ಉಂಟಾಗುತ್ತದೆ.
- ಗುಣಪಡಿಸಬಹುದಾದ ಸಮಸ್ಯೆಗಳು
- ರೆಟಿನೋಪತಿ ಆಫ್ ಪ್ರಿಮೆಚುರಿಟಿ
- ರೆಟಿನೋಬ್ಲಾಸ್ಟೊಮಾ
- ಅನುವಂಶಿಕವಾದ ರೆಟಿನಾ ಸಮಸ್ಯೆಗಳು
- ವಕ್ರೀಕಾರಕ ದೋಷಗಳು