ಕರ್ನಾಟಕ

karnataka

ETV Bharat / bharat

ಅಕ್ಟೋಬರ್ 10 ರಿಂದ 13 ರವರೆಗೆ ಜೈ ಶಂಕರ್​​ ಕಿರ್ಗಿಸ್ತಾನ್, ಕಜಕಿಸ್ತಾನ್ ಅರ್ಮೇನಿಯಾಕ್ಕೆ ಭೇಟಿ

ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಅಕ್ಟೋಬರ್ 10 ರಿಂದ 13 ರವರೆಗೆ ಕಿರ್ಗಿಸ್ತಾನ್, ಕಜಕಿಸ್ತಾನ್ ಮತ್ತು ಅರ್ಮೇನಿಯಾಕ್ಕೆ ಭೇಟಿ ನೀಡಲಿದ್ದಾರೆ.

Jaishankar
Jaishankar

By

Published : Oct 9, 2021, 3:31 PM IST

ನವದೆಹಲಿ:ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಅಕ್ಟೋಬರ್ 10 ರಿಂದ 13 ರವರೆಗೆ ಕಿರ್ಗಿಸ್ತಾನ್, ಕಜಕಿಸ್ತಾನ್ ಮತ್ತು ಅರ್ಮೇನಿಯಾಕ್ಕೆ ಭೇಟಿ ನೀಡಲಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸುವ ಸಲುವಾಗಿ ಈ ಪ್ರವಾಸ ಕೈಗೊಂಡಿದ್ದಾರೆ.

ಅಕ್ಟೋಬರ್ 10 ಮತ್ತು 11 ರಂದು ಸಚಿವರು ಕಿರ್ಗಿಸ್ತಾನ್​ಗೆ ತೆರಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ವೇಳೆ ಕಿರ್ಗಿಸ್​​​ ಅಧ್ಯಕ್ಷರನ್ನು ಭೇಟಿ ಮಾಡುವ ಬದಲು ಅಲ್ಲಿನ ವಿದೇಶಾಂಗ ಸಚಿವರ ಜತೆ ಸಭೆ ನಡೆಸಲಿದ್ದಾರೆ. ಈ ವೇಳೆ, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಎಂಇಎ ತಿಳಿಸಿದೆ.

ಅಕ್ಟೋಬರ್ 11 ರಂದು ಕಜಕಿಸ್ತಾನ್​ಗೆ ತೆರಳಲಿರುವ ಮಿನಿಸ್ಟರ್​​​ ನಜರ್ - ಸುಲ್ತಾನ್‌ನಲ್ಲಿ ನಡೆಯಲಿರುವ ಏಷ್ಯಾದಲ್ಲಿ ಸಂವಹನ ಮತ್ತು ಆತ್ಮವಿಶ್ವಾಸ ನಿರ್ಮಾಣ ಕ್ರಮಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿನ ಉಪ ಪ್ರಧಾನಿ, ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ: ರಾಜತಾಂತ್ರಿಕ ಅಧಿಕಾರಿಗೆ ಕಿರುಕುಳ ಆರೋಪ : ಓರ್ವನ ಬಂಧನ

ಅಕ್ಟೋಬರ್ 12 ರಂದು ಸಚಿವ ಜೈ ಶಂಕರ್ ಅರ್ಮೇನಿಯಾಕ್ಕೆ ಭೇಟಿ ನೀಡಲಿದ್ದಾರೆ. ಅರ್ಮೇನಿಯಾಕ್ಕೆ ಸಚಿವರ ಮೊದಲ ಭೇಟಿ ಇದಾಗಿದ್ದು, ಅಲ್ಲಿನ ಪ್ರಧಾನಿ ಹಾಗೂ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರನ್ನು ಭೇಟಿಯಾಗುತ್ತಾರೆ ಎಂದು ಸಚಿವಾಲಯ ತಿಳಿಸಿದೆ.

ABOUT THE AUTHOR

...view details