ಕರ್ನಾಟಕ

karnataka

ETV Bharat / bharat

ಚೀನಾ - ಭಾರತ ನಡುವೆ ಇಂದು ಮಾತುಕತೆ ಸಾಧ್ಯತೆ

ಪ್ಯಾಂಗಾಂಗ್​ನಲ್ಲಿ ಎರಡು ರಾಷ್ಟ್ರಗಳ ನಡುವೆ 2020ರ ಮೇನಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್​ ತಿಂಗಳಲ್ಲಿ ಮಾಸ್ಕೋದಲ್ಲಿ ಜೈ ಶಂಕರ್​ ಹಾಗೂ ವಾಂಗ್​ ಯಿ ನಡುವೆ ಮಾತುಕತೆ ನಡೆದಿತ್ತು. ಈ ಮಾತುಕತೆ ಬಳಿಕ ಉಭಯ ರಾಷ್ಟ್ರಗಳ ನಡುವೆ ಇದ್ದ ತ್ವೇಷಮಯ ವಾತಾವರಣ ತಿಳಿಗೊಂಡಿತ್ತು.

http://10.10.50.90:6060///finaloutc/english-nle/finalout/14-July-2021/12452427_ji.jpghttp://10.10.50.90:6060///finaloutc/english-nle/finalout/14-July-2021/12452427_ji.jpg
ಚೀನಾ - ಭಾರತ ನಡುವೆ ಇಂದು ಮಾತುಕತೆ ಸಾಧ್ಯತೆ

By

Published : Jul 14, 2021, 10:17 AM IST

ನವದೆಹಲಿ:ಚೀನಾದ ವಿದೇಶಾಂಗ ಸಚಿವ ವಾಂಗ್​ ಯಿ ಜತೆ ಇಂದು ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್​ ಮಾತುಕತೆ ನಡೆಸುವ ಸಾಧ್ಯತೆ ಇದೆ. ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ಉಭಯ ಸಚಿವರು ದ್ವಿಪಕ್ಷೀಯ ಸಂಬಂಧಗಳ ಬಲವರ್ದನೆ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಭೆ ಇಬ್ಬರೂ ಸಚಿವರ ನಡುವೆ ನಡೆಯುತ್ತಿರುವ ಎರಡನೇ ಮಾತುಕತೆ ಆಗಲಿದೆ. ಪ್ಯಾಂಗಾಂಗ್​ನಲ್ಲಿ ಎರಡು ರಾಷ್ಟ್ರಗಳ ನಡುವೆ 2020ರ ಮೇನಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್​ ತಿಂಗಳಲ್ಲಿ ಮಾಸ್ಕೋದಲ್ಲಿ ಜೈ ಶಂಕರ್​ ಹಾಗೂ ವಾಂಗ್​ ಯಿ ನಡುವೆ ಮಾತುಕತೆ ನಡೆದಿತ್ತು. ಈ ಮಾತುಕತೆ ಬಳಿಕ ಉಭಯ ರಾಷ್ಟ್ರಗಳ ನಡುವೆ ಇದ್ದ ತ್ವೇಷಮಯ ವಾತಾವರಣ ತಿಳಿಗೊಂಡಿತ್ತು.

ಜೂನ್ 2020 ರಲ್ಲಿ, ಜೈಶಂಕರ್​​​ ಚೀನಾದ ಸಹವರ್ತಿ ವಾಂಗ್​​​ಯಿ ಗೆ ಕಠಿಣ ಸಂದೇಶ ರವಾನಿಸಿದ್ದರು. ಎರಡೂ ರಾಷ್ಟ್ರಗಳ ನಡುವಣ ಮಾತುಕತೆ ನಡುವೆಯೂ ಚೀನಾ ಏನಾದರೂ ಅಡ್ಡದಾರಿ ಹಿಡಿದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಭಾರತ ನೇರ ಎಚ್ಚರಿಕೆ ನೀಡಿತ್ತು. ಶಾಂತಿ ಮರುಸ್ಥಾಪಿಸಲು ಚೀನಾ ಸರಿಯಾದ ಹೆಜ್ಜೆ ಇಡಬೇಕು ಎಂಬ ಸಂದೇಶವನ್ನು ಜೈ ಶಂಕರ್​​ ರವಾನಿಸಿದ್ದರು.

ಲಡಾಖ್​ನಲ್ಲಿ ಭಾರತ- ಚೀನಾ ವಾಸ್ತವ ಗಡಿ ರೇಖೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ವೀರಮರಣವನ್ನಪ್ಪಿದ್ದರು. ಇನ್ನು ಚೀನಾದ ಕಡೆ 43 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಆದರೆ, ಚೀನಾ ಸಾವು - ನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ABOUT THE AUTHOR

...view details