ನವದೆಹಲಿ: ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಈ ವರ್ಷ ಇ - ಪಾಸ್‌ಪೋರ್ಟ್‌ಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ಇ-ಪಾಸ್‌ಪೋರ್ಟ್ ಎಲೆಕ್ಟ್ರಾನಿಕ್ ಚಿಪ್ ಒಳಗೊಂಡಿರುತ್ತದೆ. ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ನಾಗರಿಕರಿಗೆ ಒದಗಿಸಲಾಗುತ್ತದೆ. ಇ-ಪಾಸ್‌ಪೋರ್ಟ್‌ಗಳು ಹೆಚ್ಚಿನ ಭದ್ರತಾ ಫೀಚರ್‌ಗಳನ್ನು ಒಳಗೊಂಡಿರುತ್ತದೆ. ಪಾಸ್‌ಪೋರ್ಟ್‌ನಲ್ಲಿ ಎಕ್ಟ್ರಾನಿಕ್ ಚಿಪ್ ಇದ್ದು ಅದರ ಮೇಲೆ ಎನ್‌ಕೋಡ್ ಮಾಡಲಾದ ಭದ್ರತೆಗೆ ಸಂಬಂಧಿಸಿದ ಡೇಟಾ ದಾಖಲಾಗಿರುತ್ತದೆ.