ಕರ್ನಾಟಕ

karnataka

ETV Bharat / bharat

ದ್ವಾರಕಾ ಮರ್ಯಾದಾ ಹತ್ಯೆ ಪ್ರಕರಣ: ಪತಿ - ಪತ್ನಿ ಮೇಲೆ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿ ಬಂಧನ

ಪರಸ್ಪರ ಪ್ರೀತಿಸಿ ಕಳೆದ ವರ್ಷ ಮನೆಯಿಂದ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದ ಜೋಡಿ ಮೇಲೆ ಫೈರಿಂಗ್ ನಡೆಸಲಾಗಿತ್ತು. ಇದೀಗ ಆರೋಪಿಯ ಬಂಧನ ಮಾಡಲಾಗಿದೆ.

Dwarka honour killing case
Dwarka honour killing case

By

Published : Jun 30, 2021, 8:23 PM IST

ನವದೆಹಲಿ: 26 ವರ್ಷದ ವ್ಯಕ್ತಿಯೊಬ್ಬ ಸೋದರ ಸಂಬಂಧಿ ಹಾಗೂ ಆತನ ಹೆಂಡತಿ ಮೇಲೆ ಗುಂಡಿನ ದಾಳಿ ನಡೆಸಿರುವ ಪ್ರಕರಣ ನಡೆದಿತ್ತು. ಇದೀಗ ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಈ ಘಟನೆ ನಡೆದಿತ್ತು.

ನವದೆಹಲಿಯ ದ್ವಾರಕಾದಲ್ಲಿ ಈ ಪ್ರಕರಣ ನಡೆದಿತ್ತು. ಗುಂಡಿನ ದಾಳಿಗೆ ವ್ಯಕ್ತಿ ಸಾವನ್ನಪ್ಪಿದ್ದು, ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಳು. ಜೂನ್​​ 24ರ ರಾತ್ರಿ ದ್ವಾರಕಾ ಸೆಕ್ಟರ್​​​ 23ರಲ್ಲಿ ಫೈರಿಂಗ್ ಮಾಡಲಾಗಿತ್ತು. ಆರೋಪಿಯನ್ನ ವಿಕ್ಕಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿರಿ: ಲವ್​​ ಮ್ಯಾರೇಜ್​ ಮಾಡಿಕೊಂಡಿದ್ದ ಜೋಡಿ ಮೇಲೆ ಗುಂಡಿನ ದಾಳಿ... CCTVಯಲ್ಲಿ ದೃಶ್ಯ ಸೆರೆ

ವಿನಯ್​ ಮೇಲೆ ನಾಲ್ಕು ಸಲ ಫೈರ್ ಮಾಡಿದ್ದ ಆರೋಪಿ, ಕಿರಣ್​ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿದ್ದನು. ಇದರಿಂದ ಆಕೆ ಗಾಯಗೊಂಡಿದ್ದಳು. ಕಿರಣ್​ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಇದೊಂದು ಮರ್ಯಾದಾ ಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಕಳೆದ ಒಂದು ವರ್ಷದ ಹಿಂದೆ ದಂಪತಿಗಳು ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಓಡಿ ಹೋಗಿದ್ದರು.

ಇದರಿಂದ ಯುವತಿ ಕುಟುಂಬ ಆಕ್ರೋಶಗೊಂಡಿತ್ತು. ಇದಾದ ಬಳಿಕ ತಮ್ಮಗೆ ರಕ್ಷಣೆ ನೀಡುವಂತೆ ಜೋಡಿ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ ಸಂಪರ್ಕ ಮಾಡಿದ್ದರು. ತದನಂತರ ದೆಹಲಿಯ ಅಮ್ರಾಯಿ​ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದರು. ಬಳಿಕ ತಮ್ಮ ಕುಟುಂಬದೊಂದಿಗೆ ಯಾವುದೇ ರೀತಿಯ ಸಂಪರ್ಕ ಸಾಧಿಸಿರಲಿಲ್ಲ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೇ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ABOUT THE AUTHOR

...view details