ಚೆನ್ನೈ, ತಮಿಳುನಾಡು:ಸಹಕಾರ ಬ್ಯಾಂಕೊಂದರ ಅಧ್ಯಕ್ಷರಾಗಿರುವ ಆರ್. ಇಳಂಗೋವನ್ಗೆ ಸಂಬಂಧಿಸಿದ ಸ್ಥಳಗಳ ಮೇಲೆ ತಮಿಳುನಾಡು ಜಾಗೃತ ನಿರ್ದೇಶನಾಲಯ ಮತ್ತು ಭ್ರಷ್ಟಾಚಾರ ವಿರೋಧಿ ದಳದ (DVAC) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸುಮಾರು 29.7 ಲಕ್ಷ ರೂಪಾಯಿ ನಗದು, 10 ಐಷಾರಾಮಿ ಕಾರುಗಳು, 2 ವೋಲ್ವೋ ಬಸ್, 21.2 ಕೆಜಿ ಚಿನ್ನ, 282 ಕೆಜಿ ಬೆಳ್ಳಿ ಮತ್ತು 3 ಹಾರ್ಡ್ ಡಿಸ್ಕ್ ಹಾಗೂ ಇತರ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಇಳಂಗೋವನ್ಗೆ ಸಂಬಂಧಿಸಿದ 26 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಸೇಲಂನಲ್ಲಿ 16 ಸ್ಥಳಗಳು, ನಮಕ್ಕಲ್ನಲ್ಲಿ 2 ಸ್ಥಳಗಳು, ಚೆನ್ನೈನಲ್ಲಿ 2 ಸ್ಥಳಗಳು, ತಿರುಚ್ಚಿಯ 4 ಸ್ಥಳಗಳು ಹಾಗೂ ಕರೂರ್ನಲ್ಲಿರುವ ಇಳಂಗೋವನ್ಗೆ ಸಂಬಂಧಿಸಿದ ಸ್ಥಳದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ಮುಂದುವರೆಸಲಾಗಿದೆ. ಇನ್ನು ಇಳಂಗೋವನ್ ತಮಿಳುನಾಡಿನ ಮಾಜಿ ಸಿಎಂ ಇ.ಪನ್ನೀರ್ಸೆಲ್ವಂ ಅವರಿಗೆ ಆಪ್ತನಾಗಿದ್ದನು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಉತ್ತರಾಖಂಡ ಟ್ರೆಕ್ಕಿಂಗ್ ದುರಂತ: ಏಳಕ್ಕೇರಿದ ಸಾವಿನ ಸಂಖ್ಯೆ, ಇಬ್ಬರಿಗಾಗಿ ಶೋಧ