ಪಾಟ್ನಾ (ಬಿಹಾರ): ಬಿಹಾರಿ ಹುಡುಗನೊಬ್ಬ ಡಚ್ (ನೆದರ್‌ಲ್ಯಾಂಡ್ಸ್) ಹುಡುಗಿಯನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ನೆದರ್ಲ್ಯಾಂಡ್ಸ್ನ ಮೈರಾ ಮತ್ತು ಬಿಹಾರದ ಆದಿ ಮದುವೆಯಾದವರು.
ತಮ್ಮಿಬ್ಬರ ಮದುವೆಗೆ ಯಾವುದೇ ಗಡಿ, ಭಾಷೆ ಮತ್ತು ವ್ಯಾಪ್ತಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಸದ್ಯ ಇವರಿಬ್ಬರ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ. ವಿಡಿಯೋ ನೋಡಿದ ನೆಟಿಜನ್ಸ್ ಅಚ್ಚರಿಯ ಜೊತೆಗೆ ಶುಭಾಶಯ ಕೂಡ ಕೋರುತ್ತಿದ್ದಾರೆ.
ಡಚ್ ಹುಡುಗಿಯನ್ನು ವರಿಸಿದ ಬಿಹಾರಿ ಹುಡುಗ ಪ್ರೇಮಾಂಕುರಕ್ಕೆ ತಳಹದಿ: ಯುವಕ ಆದಿ ಬಿಹಾರದಿಂದ 2015 ರಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಇದೇ ವೇಳೆ ಮೈರಾ ಕೂಡ ರಜೆ ನಿಮಿತ್ತ ನೆದರ್ಲೆಂಡ್ಸ್ನಿಂದ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಕಾಕತಾಳೀಯ ಎಂಬಂತೆ ಇಬ್ಬರೂ ಒಂದೇ ಕಟ್ಟಡದಲ್ಲಿ ಉಳಿದುಕೊಂಡರು. ಪರಿಚಯವಾದ ಮೊದಲ ದಿನವೇ ಆಸ್ಟ್ರೇಲಿಯಾದ ವಿವಿಧ ಸ್ಥಳಗಳನ್ನು ಒಟ್ಟಿಗೆ ಅನ್ವೇಷಿಸಲು ಪ್ರಾರಂಭಿಸಿದರು. ಇಬ್ಬರೂ ಯೂಟ್ಯೂಬರ್ ಆಗಿದ್ದರಿಂದ ಆಲೋಚನೆಗಳು ಸಹ ಒಂದೇ ಆಗಿದ್ದವು.
ಡಚ್ ಹುಡುಗಿಯನ್ನು ವರಿಸಿದ ಬಿಹಾರಿ ಹುಡುಗ ಕೆಲವು ದಿನಗಳ ಬಳಿಕ ತಮ್ಮಿಬ್ಬರ ಸ್ನೇಹ ಪ್ರೀತಿಯಾಗಿ ಪರಿವರ್ತನೆ ಆಯಿತು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡತೊಡಗಿದರು. ಪ್ರೇಮ ನಿವೇದನೆ ಬಳಿಕ ಮೈರಾ ನೆದರ್ಲ್ಯಾಂಡ್ಸ್ಗೆ ಹಿಂತಿರುಗಿದರೆ ಆದಿ ತನ್ನ ಪೋಷಕರಿಗೆ ತನ್ನ ಅಭಿಪ್ರಾಯ ತಿಳಿಸಿದ್ದರು. ಅವರ ಒಪ್ಪಿಗೆ ಬಳಿಕ ಆದಿ ನೆದರ್ಲ್ಯಾಂಡ್ಸ್ ಗೆ ತೆರಳಿದ್ದರು. ಪ್ರತಿಯಾಗಿ ಮೈರಾ ಕುಟುಂಬದ ಕಡೆಯವರು ಸಹ ಒಪ್ಪಿಗೆ ಸೂಚಿಸಿದ್ದರು. 2020ರಿಂದ ಒಟ್ಟಿಗೆ ಓಡಾಡುವ ಮೂಲಕ, ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಂಡ ಬಳಿಕವೇ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.
ಡಚ್ ಹುಡುಗಿಯನ್ನು ವರಿಸಿದ ಬಿಹಾರಿ ಹುಡುಗ ಡಚ್ ಹುಡುಗಿಯನ್ನು ವರಿಸಿದ ಬಿಹಾರಿ ಹುಡುಗ ಇತ್ತೀಚೆಗೆ ಪಾಟ್ನಾದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಬ್ಬರು ಯೂಟ್ಯೂಬರ್ ಆಗಿದ್ದರಿಂದ 'Travel Couple' ಎಂದು ಬರೆದುಕೊಳ್ಳುವ ಮೂಲಕ ತಮ್ಮ ಅನಿಸಿಕೆ ಸಹ ಹಂಚಿಕೊಂಡಿದ್ದಾರೆ. ಸದ್ಯ ಇವರು ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್ ಮತ್ತು ನೇಪಾಳದ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತ ಎಂಜಾಯ್ ಮಾಡುತ್ತಿದ್ದಾರೆ. ಈ ಜೋಡಿ ತಮ್ಮ ಮದುವೆಯ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದು, ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್ ನೀಡಲು ಮುಂದಾದ ಅಭಿಮಾನಿಗಳು.. ಬಾದಾಮಿಯಿಂದಲೇ ಸ್ಪರ್ಧಿಸುವಂತೆ ದುಂಬಾಲು