ಕರ್ನಾಟಕ

karnataka

ETV Bharat / bharat

ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು 300ಮೀ ಎಳೆದೊಯ್ದ ಕಾರು: ಚಾಲಕನ ಬಂಧನ - ವಾಹನ ತಪಾಸಣೆ

ವಾಹನ ತಪಾಸಣೆ ವೇಳೆ ಕಾರು ನಿಲ್ಲಿಸದೇ ಪೊಲೀಸ್​ ಸಿಬ್ಬಂದಿಗೆ ಡಿಕ್ಕಿ ಹೊಡೆದು ಬಾನೆಟ್​ ಮೇಲೆ ಎಳೆದೊಯ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಕಾರು
ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಕಾರು

By ETV Bharat Karnataka Team

Published : Nov 6, 2023, 8:08 PM IST

ಸೂರತ್( ಗುಜರಾತ್​)​: ವಾಹನ ತಪಾಸಣೆ ವೇಳೆ ಚಾಲಕನೊಬ್ಬ ಕಾರು ನಿಲ್ಲಿಸದೇ ಕರ್ತವ್ಯದಲ್ಲಿದ್ದ​ ಪೊಲೀಸ್​ ಸಿಬ್ಬಂದಿಗೆ ಡಿಕ್ಕಿ ಹೊಡೆದು ಕಾರಿನ ಬಾನೆಟ್​ ಮೇಲೆ ಎಳೆದೊಯ್ದ ಘಟನೆ ಸೂರತ್‌ನ ಕಟರ್ಗಾಮ್ ಪ್ರದೇಶದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ​ ಗಾಯಗೊಂಡಿದ್ದು, ಕತರಗಾಂ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸೂರತ್‌ನ ಕಟರ್ಗಾಂನ ಅಲ್ಕಾಪುರಿ ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆ ನಡೆಸಿತು. ಈ ವೇಳೆ, ನಂಬರ್ ಪ್ಲೇಟ್ ಇಲ್ಲದ ಕಾರು ಬರುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಅದನ್ನು ತಡೆಯಲು ಮುಂದಾಗಿದ್ದಾರೆ. ಆದರೆ, ಚಾಲಕ ಏಕಾಎಕಿ ಕಾರಿನ ವೇಗ ಹೆಚ್ಚಿಸಿ ಚಲಾಯಿಸಲು ಪ್ರಾರಂಭಿಸಿದ್ದಾನೆ. ಅಲ್ಲಿದ್ದ ಸಿಬ್ಬಂದಿ ಕಾರಿಗೆ ಅಡ್ಡ ನಿಂತಿದ್ದರಿಂದ ಅವರಿಗೂ ಡಿಕ್ಕಿ ಹೊಡೆದಿದ್ದು. ಇದರಿಂದ ಅವರು ಕಾರಿನ ಬಾನೆಟ್​ ಮೇಲೆ ಬಿದ್ದಿದ್ದಾರೆ. ಕಾರು ನಿಲ್ಲಿಸದೇ ಅಲ್ಕಾಪುರಿ ಸೇತುವೆಯಿಂದ ಸುಮುಲ್ ಡೈರಿ ಗೇಟ್‌ವರೆಗೆ ಸುಮಾರು 300 ಮೀಟರ್‌ವರೆಗೆ ಎಳೆದೊಯ್ದು ಅಲ್ಲಿ ಕೆಳಗೆ ಎಸೆದು ಪರಾರಿಯಾಗಿದ್ದಾನೆ.

ಈ ಘಟನೆ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದ್ದು, ಕಾರು ಚಾಲಕನ ಹಿಂದೆ ಪೊಲೀಸರು ಓಡುತ್ತಿರುವುದು ಕಂಡು ಬಂದಿದೆ. ಈ ಘಟನೆಯ ಬಳಿಕ ಸಿಸಿಟಿವಿ ಪರಿಶೀಲಿಸಿದ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿ ಕಾರು ಚಾಲಕನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಪೊಲೀಸ್​ ಪೇದೆ ಗೌತಮ್ ಬಾಬುಭಾಯಿ ಜೋಶಿ ಕತರಗಾಂ ಗಾಯಗೊಂಡಿದ್ದಾರೆ. ಬಂಧಿತ ಆರೋಪಿ 19 ವರ್ಷದ ಯುವಕ ದೇವರಾಜ್ ಬಾಡಿಯಾ ಎಂದು ಗುರುತಿಸಲಾಗಿದೆ.

ಸಹಾಯಕ ಪೊಲೀಸ್ ಆಯುಕ್ತರು ಹೇಳಿದ್ದಿಷ್ಟು: ಘಟನೆ ಬಗ್ಗೆ ಎಸಿಪಿ ಎಲ್​ಬಿ ಝಾಲಾ ಅವರು ಮಾತನಾಡಿ, ನಮ್ಮ ತಂಡ ಅಲ್ಕಾಪುರಿ ಸೇತುವೆಯ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಬಿಳಿ ಬಣ್ಣದ ಕಾರು ಬಂದಿದೆ. ಪೊಲೀಸ್​ ಸಿಬ್ಬಂದಿ ತಡೆಯಲು ಮುಂದಾಗಿದ್ದಾರೆ. ಆದರೆ ಅವರನ್ನು ಕಂಡ ತಕ್ಷಣ ಚಾಲಕ ವೇಗದಲ್ಲಿ ಕಾರು ಚಲಾಯಿಸಿದ್ದಾನೆ. ಈ ವೇಳೆ, ಅಲ್ಲಿದ್ದ ಪೊಲೀಸ್ ಪೇದೆ ಗೌತಮ್ ಜೋಶಿ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಕಾರು ಚಾಲಕ 300ರಿಂದ 400 ಮೀಟರ್ ದೂರದ ವರೆಗೆ ಎಳೆದೊಯ್ದ . ಸದ್ಯ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಎಲ್​ಬಿ ಝಾಲಾ ಹೇಳಿದ್ದಾರೆ.

ಇದನ್ನೂ ಓದಿ:ಡಿಕ್ಕಿ ಹೊಡೆದು 100 ಮೀಟರ್​ ಎಳೆದೊಯ್ದ ಕಾರು: ಪವಾಡ ಸದೃಶದಂತೆ ವೃದ್ಧೆ ಪಾರು

ABOUT THE AUTHOR

...view details