ಕರ್ನಾಟಕ

karnataka

ETV Bharat / bharat

ಪ್ರಧಾನಿ ಭೇಟಿಯಾದ ರಷ್ಯಾ ವಿದೇಶಾಂಗ ಸಚಿವ: ಮಧ್ಯಸ್ಥಿಕೆ ವಹಿಸುವಂತೆ ಮನವಿ, ಹಿಂಸಾಚಾರ ನಿಲ್ಲಿಸುವಂತೆ ಪಿಎಂ ಕರೆ - ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್

ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್ - ರಷ್ಯಾ ನಡುವಿನ ಶಾಂತಿ ಮಾತುಕತೆಗಳು ಹಾಗೂ ಪರಿಹಾರ ಕಂಡುಕೊಳ್ಳಲು ವಿಫಲವಾದ ಕಾರಣ ಭಾರತವು ಉಭಯ ರಾಷ್ಟ್ರಗಳು ನಡುವೆ ಮಧ್ಯಸ್ಥಿಕೆ ವಹಿಸಬಹುದು ಎಂದು ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಹೇಳಿದ್ದಾರೆ

ಪ್ರಧಾನಿ ಭೇಟಿಯಾದ ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್
PM Modi meets Russia's FM Sergey Lavrov

By

Published : Apr 1, 2022, 10:50 PM IST

Updated : Apr 1, 2022, 10:58 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಶುಕ್ರವಾರ ಸಂಜೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ, ಉಕ್ರೇನ್​ನಲ್ಲಿ ಹಿಂಸಾಚಾರವನ್ನು ನಿಲ್ಲಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದು, ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಯಾವುದೇ ರೀತಿಯಲ್ಲಿ ಸಹಕಾರ ಮತ್ತು ನೆರವು ಭಾರತವು ಸಿದ್ಧವಿದೆ ಎಂದಿದ್ದಾರೆ.

ಎರಡು ದಿನಗಳ ಭಾರತದ ಪ್ರವಾಸ ಕೈಗೊಂಡಿರುವ ರಷ್ಯಾದ ಸಚಿವ ಲಾವ್ರೊವ್ ಮಧ್ಯಾಹ್ನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ನಂತರ ಪ್ರಧಾನಿ ಅವರನ್ನು ಭೇಟಿ ಮಾಡಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ಸೇರಿದಂತೆ ಇತರ ವಿಷಯಗಳ ವಿವರಿಸಿದರು. ಅಲ್ಲದೇ 2021ರ ಡಿಸೆಂಬರ್​ನಲ್ಲಿ ನಡೆದ ಭಾರತ - ರಷ್ಯಾ ದ್ವಿಪಕ್ಷೀಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಪ್ರಗತಿಯ ಕುರಿತೂ ಪ್ರಧಾನಿಯವರಿಗೆ ಲಾವ್ರೊವ್ ಮಾಹಿತಿ ನೀಡಿದರು.

ಇದನ್ನೂ ಓದಿ:1,400 ಕೋಟಿಗಾಗಿ 26 ಸಾವಿರ ಕೋಟಿ ಮೌಲ್ಯದ ಕಂಪನಿ ನಾಶ ಮಾಡಿದ ಅಮೆಜಾನ್: ಫ್ಯೂಚರ್ ರಿಟೇಲ್ ಆರೋಪ

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ನಡೆಯ ಬಗ್ಗೆ ಭಾರತ ತಟಸ್ಥವಾಗಿರುವುದು ಪ್ರಧಾನಿ ಮೋದಿ - ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಸಭೆ ಸಾಕಷ್ಟ ಗಮನವನ್ನೂ ಸೆಳೆದಿದೆ. ಯುದ್ಧವನ್ನು ಕೊನೆಗೊಳಿಸಲು ಉಕ್ರೇನ್-ರಷ್ಯಾ ನಡುವಿನ ಶಾಂತಿ ಮಾತುಕತೆಗಳು ಹಾಗೂ ಪರಿಹಾರ ಕಂಡುಕೊಳ್ಳಲು ವಿಫಲವಾದ ಕಾರಣ ಭಾರತವು ಉಭಯ ರಾಷ್ಟ್ರಗಳು ನಡುವೆ ಮಧ್ಯಸ್ಥಿಕೆ ವಹಿಸಬಹುದು ಎಂದು ಲಾವ್ರೊವ್ ಹೇಳಿದ್ದಾರೆ ಅಂತಾ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಷ್ಯಾ - ಉಕ್ರೇನ್ ಮಧ್ಯೆ ಭಾರತ ಮಧ್ಯಸ್ಥಿಕೆ ವಹಿಸುವ ಸಾಧ್ಯತೆಯ ಪ್ರಶ್ನೆಗೆ ಲಾವ್ರೊವ್, "ಭಾರತವು ಒಂದು ಪ್ರಮುಖ ದೇಶವಾಗಿದೆ. ಭಾರತವು ಸಮಸ್ಯೆಯ ಪರಿಹಾರವನ್ನು ಒದಗಿಸುವ ಆ ಪಾತ್ರವನ್ನು ವಹಿಸಲು ನೋಡಿದರೆ, ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಸಮ್ಮತವಾದ ಮತ್ತು ತರ್ಕಬದ್ಧವಾದ ವಿಧಾನ ಒದಗಿಸುವ ನಿಲುವನ್ನು ಭಾರತ ಹೊಂದಿದ್ದರೆ, ಅಂತಹ ಪ್ರಕ್ರಿಯೆ ಬೆಂಬಲಿಸಬಹುದು ಎಂದಿದ್ದಾರೆ. ಅಲ್ಲದೇ, ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅವರು ಶ್ಲಾಘಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಇದನ್ನೂ ಓದಿ:ಭಿನ್ನಾಭಿಪ್ರಾಯ ಶಮನಕ್ಕೆ ಮಾತುಕತೆಯೇ ಮದ್ದು: ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಜತೆ ಜೈಶಂಕರ್ ಮಹತ್ವದ ಚರ್ಚೆ

Last Updated : Apr 1, 2022, 10:58 PM IST

ABOUT THE AUTHOR

...view details