ಧನ್ಬಾದ್(ಜಾರ್ಖಂಡ್):ಧನ್ಬಾದ್ ರೈಲ್ವೇ ವಿಭಾಗದ ಪ್ರಧಾನ್‌ಖಾಂತಾ ನಿಲ್ದಾಣದ ಬಳಿಯ ಛಟಕುಳಿ ಗ್ರಾಮದ ಬಳಿ ಅಂಡರ್‌ಪಾಸ್ ಕುಸಿದು ಅವಶೇಷಗಳಡಿಯಲ್ಲಿ ಸಿಲುಕಿ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ರೈಲ್ವೇ ಅಂಡರ್‌ಪಾಸ್ ಕುಸಿದು ನಾಲ್ವರು ಕಾರ್ಮಿಕರು ಸಾವು - ಧನ್ಬಾದ್ನಲ್ಲಿ ರೈಲ್ವೇ ಅಂಡರ್‌ಪಾಸ್ ಕುಸಿದು ಕೂಲಿ ಕಾರ್ಮಿಕರ ಸಾವು
ರೈಲ್ವೇ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದಾಗ ಹಠಾತ್ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಅವಶೇಷಗಳಡಿ ಸಿಲುಕಿ ಮೃತಪಟ್ಟ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.
![ರೈಲ್ವೇ ಅಂಡರ್‌ಪಾಸ್ ಕುಸಿದು ನಾಲ್ವರು ಕಾರ್ಮಿಕರು ಸಾವು construction of underpass in Dhanbad Dhanbad Railway Division Chhatakuli Village Jharkhand News ಜಾರ್ಖಂಡ್‌ನಲ್ಲಿ ರೈಲ್ವೇ ಅಂಡರ್‌ಪಾಸ್ ಕುಸಿದು ಬಿದ್ದು ನಾಲ್ವರು ಸಾವು ಧನ್ಬಾದ್ನಲ್ಲಿ ರೈಲ್ವೇ ಅಂಡರ್‌ಪಾಸ್ ಕುಸಿದು ಕೂಲಿ ಕಾರ್ಮಿಕರ ಸಾವು ಧನ್ಬಾದ್ ಅಪರಾಧ ಸುದ್ದಿ](https://etvbharatimages.akamaized.net/etvbharat/prod-images/768-512-15809414-thumbnail-3x2-dfesd.jpg)
ಅವಘಡ ಸಂಭವಿಸಿದ್ದು ಹೇಗೆ?: ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ರಾತ್ರಿ ವೇಳೆ ನಡೆಯುತ್ತಿತ್ತು. ಅಷ್ಟರಲ್ಲಿ ಗೂಡ್ಸ್ ರೈಲೊಂದು ಹಾದು ಹೋಗಿದೆ. ನಂತರ ಇದ್ದಕ್ಕಿದ್ದಂತೆ ಮಣ್ಣು ಕುಸಿಯಲಾರಂಭಿಸಿದೆ. ಕಾರ್ಮಿಕರು ರೈಲ್ವೆ ಹಳಿಯಿಂದ ಅಂದಾಜು 10 ಅಡಿ ಕೆಳ ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕೆಳಸೇತುವೆ ಕುಸಿದಿದ್ದರಿಂದ 6 ಕಾರ್ಮಿಕರು ಅವಶೇಷಗಳಡಿ ಸಿಲುಕಿದ್ದಾರೆ. ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಇಬ್ಬರು ಕೂಲಿ ಕಾರ್ಮಿಕರನ್ನು ಬಚಾವ್ ಮಾಡಲಾಯಿತು. ಆದ್ರೆ ಅವಶೇಷಗಳಡಿಯಲ್ಲಿ ನಾಲ್ವರು ಹೂತು ಹೋಗಿ ಪ್ರಾಣ ಕಳೆದುಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಇದನ್ನೂ ಓದಿ:ಪತ್ನಿ ನೆರವಿಗೆ ಧಾವಿಸಿದ ಪತಿ, ತಂದೆ-ತಾಯಿ ಎಬ್ಬಿಸಲು ಹೋದ ಮಕ್ಕಳು; ವಿದ್ಯುತ್ ಶಾಕ್‌ಗೆ ನಾಲ್ವರು ಬಲಿ