ಕರ್ನಾಟಕ

karnataka

ETV Bharat / bharat

ಜನ ಸಾಮಾನ್ಯರಿಗೆ ನಾಳೆಯಿಂದ ಜಿಎಸ್​ಟಿ ಮತ್ತಷ್ಟು ಹೊರೆ.. ಯಾವ ವಸ್ತುಗಳಿಗೆ ಎಷ್ಟು ತೆರಿಗೆ? - ಆಹಾರ ಪದಾರ್ಥಗಳ ಬೆಲೆ ಏರಿಕೆ

ಆಹಾರ ಪದಾರ್ಥಗಳ ಮೇಲೆ ಜಿಎಸ್​ಟಿ ತೆರಿಗೆ ಅನ್ವಯವಾಗುವುದರಿಂದ ಸೋಮವಾರದಿಂದ ಹಲವು ವಸ್ತುಗಳ ಮೇಲೆ ಮತ್ತಷ್ಟು ಹೆಚ್ಚಾಗಲಿದೆ. ಯಾವ ವಸ್ತುಗಳಿಗೆ ಎಷ್ಟು ಜಿಎಸ್​ಟಿ ವಿಧಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

due-to-gst-packed-and-label-products-costlier-from-monday
ಜನ ಸಾಮಾನ್ಯರಿಗೆ ನಾಳೆಯಿಂದ ಜಿಎಸ್​ಟಿ ಹೊರೆ: ಯಾವ ವಸ್ತುಗಳಿಗೆ ಎಷ್ಟು ತೆರಿಗೆ ಗೊತ್ತಾ?

By

Published : Jul 17, 2022, 8:17 PM IST

ನವದೆಹಲಿ: ಜಿಎಸ್‌ಟಿ ಏರಿಕೆಯಿಂದ ಸೋಮವಾರ (ಜುಲೈ 18)ದಿಂದ ದುನಿಯಾ ಮತ್ತಷ್ಟು ದುಬಾರಿಯಾಗಲಿದೆ. ಶೇ.5ರಷ್ಟು ಜಿಎಸ್​ಟಿ ತೆರಿಗೆ ವಿಧಿಸುವುದರಿಂದ ಹಿಟ್ಟು, ಸಕ್ಕರೆ, ಅಕ್ಕಿ, ಪನ್ನೀರ್ ಮತ್ತು ಮೊಸರು ಸೇರಿದಂತೆ ಹಲವು ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದಿದ್ದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಡಬ್ಬಿ ಅಥವಾ ಪ್ಯಾಕ್ ಮತ್ತು ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಜಿಎಸ್​ಟಿ ತೆರಿಗೆ ವಿಧಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಇದರಿಂದ ಮೀನು, ಮೊಸರು, ಪನ್ನೀರ್, ಲಸ್ಸಿ, ಜೇನುತುಪ್ಪ, ಅಕ್ಕಿ, ಗೋಧಿ, ರೈಸ್​, ಬಾರ್ಲಿ, ಓಟ್ಸ್, ಒಣ ಸೋಯಾಬೀನ್, ಬಟಾಣಿ ಮುಂತಾದ ಉತ್ಪನ್ನಗಳ ಮೇಲೆ ಶೇ.5ರಷ್ಟು ಜಿಎಸ್​ಟಿ ಅನ್ವಯವಾಗಲಿದೆ.

ಈ ರೀತಿಯಾಗಿ, 5,000 ರೂ.ಗಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆ ಕೊಠಡಿಗಳ ಮೇಲೆಯೂ ಜಿಎಸ್​ಟಿ ಪಾವತಿಸಬೇಕಾಗುತ್ತದೆ. ಇದಲ್ಲದೆ, ದಿನಕ್ಕೆ 1,000 ರೂ.ಗಿಂತ ಕಡಿಮೆ ಬಾಡಿಗೆ ಇರುವ ಹೋಟೆಲ್ ಕೊಠಡಿಗಳ ಮೇಲೆ ಶೇ.12ರ ದರದಲ್ಲಿ ತೆರಿಗೆ ವಿಧಿಸಲಾಗಿದೆ. ಈ ಎಲ್ಲ ತೆರಿಗೆ ದರಗಳು ಸೋಮವಾರದಿಂದ ಜಾರಿಗೆ ಬರಲಿವೆ.

ಇಷ್ಟೇ ಅಲ್ಲ, ಪ್ರಿಂಟಿಂಗ್, ಡ್ರಾಯಿಂಗ್ ಇಂಕ್, ಚಾಕುಗಳು, ಪೇಪರ್ ಕತ್ತರಿಸುವ ಚಾಕುಗಳು ಮತ್ತು ಪೆನ್ಸಿಲ್ ಶಾರ್ಪನರ್​ಗಳು, ಎಲ್ಇಡಿ ಬಲ್ಬ್​ಗಳು, ಡ್ರಾಯಿಂಗ್ ಮತ್ತು ಮಾರ್ಕಿಂಗ್ ಉತ್ಪನ್ನಗಳ ಮೇಲಿನ ತೆರಿಗೆ ದರಗಳನ್ನು ಶೇ.18ಕ್ಕೆ ಹೆಚ್ಚಿಸಲಾಗಿದೆ. ಸೋಲಾರ್ ವಾಟರ್ ಹೀಟರ್‌ಗಳ ಮೇಲೂ ಶೇ.12ರಷ್ಟು ಜಿಎಸ್‌ಟಿ ಹಾಕಲಾಗುತ್ತಿದೆ. ಈ ಹಿಂದೆ ಇದರ ಜಿಎಸ್​ಟಿ ಶೇ.5ರಷ್ಟು ಮಾತ್ರ ಇತ್ತು.

ಅದೇ ರೀತಿ, ಟೆಟ್ರಾ ಪ್ಯಾಕ್ ಮತ್ತು ಬ್ಯಾಂಕ್ ಚೆಕ್‌ಗಳ ಮೇಲೆ ಶೇ.18ರಷ್ಟು ಮತ್ತು ಅಟ್ಲಾಸ್ ಸೇರಿದಂತೆ ಇತರೆ ನಕ್ಷೆಗಳು ಮತ್ತು ಚಾರ್ಟ್‌ಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇತ್ತ, ರಸ್ತೆ, ಸೇತುವೆ, ರೈಲ್ವೆ, ಮೆಟ್ರೊ, ತ್ಯಾಜ್ಯ ಸಂಸ್ಕರಣಾ ಘಟಕದ ಕಾಮಗಾರಿಗಳ ಗುತ್ತಿಗೆಗಳ ಮೇಲೆ ಶೇ.18ರಷ್ಟು ಜಿಎಸ್‌ಟಿ ಹಾಕಲಾಗುತ್ತದೆ.

ಆದಾಗ್ಯೂ, ರೋಪ್‌ವೇಗಳು ಮತ್ತು ಕೆಲವು ಶಸ್ತ್ರಚಿಕಿತ್ಸಾ ಉಪಕರಣಗಳು, ಸರಕು ಮತ್ತು ಪ್ರಯಾಣಿಕರ ಸಾಗಣೆಯ ಮೇಲಿನ ತೆರಿಗೆ ದರವನ್ನು ಶೇ.12ರಿಂದ 5ಕ್ಕೆ ಇಳಿಸಲಾಗಿದೆ. ಇದೇ ವೇಳೆ ಬ್ಯಾಟರಿ ಇರುವ ಅಥವಾ ಇಲ್ಲದ ಎಲೆಕ್ಟ್ರಿಕ್ ವಾಹನಗಳ ಮೇಲಿನ ರಿಯಾಯಿತಿ ಶೇ.5ರಷ್ಟು ಜಿಎಸ್​ಟಿ ಮುಂದುವರೆಯಲಿವೆ.

ಇದನ್ನೂ ಓದಿ:ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆಯ ಬರೆ.. ನಾಳೆಯಿಂದಲೇ ಮೊಸರು, ಮಜ್ಜಿಗೆ, ಲಸ್ಸಿ ದುಬಾರಿ

ABOUT THE AUTHOR

...view details