ಮುಂಬೈ: ಕೊಲಾಬಾದ ಪ್ರಸಿದ್ದ ತಾಜ್ ಹೋಟೆಲ್ನ 10 ನೇ ಮಹಡಿಯಿಂದ ಹಾರಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಾರುಖ್ ಇಂಜಿನಿಯರ್ (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೊಲಾಬಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಜಯ್ ಹತಿಸ್ಕರ್ ಈ ಬಗ್ಗೆ ಮಾಹಿತಿ ನೀಡಿ, ಮಧ್ಯಾಹ್ನ ಸುಮಾರು 2.30 ರ ಹೊತ್ತಿಗೆ ಶಾರುಖ್ ಹೋಟೆಲ್ನ ಹತ್ತನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದು, ಐದನೇ ಮಹಡಿಯಲ್ಲಿ ಬಿದ್ದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟರು. ಈ ಬಗ್ಗೆ ಮೃತರ ಪೋಷಕರಿಂದ ಯಾವುದೇ ದೂರು ದಾಖಲಾಗಿಲ್ಲ ಎಂದರು.