ಕರ್ನಾಟಕ

karnataka

ETV Bharat / bharat

ಅಣ್ಣನಿಂದ ತಮ್ಮನ ಹೆಂಡತಿಯ ಮೇಲೆಯೇ ಅತ್ಯಾಚಾರ - ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ರಾಜಸ್ಥಾನದ ಚುರು ಗ್ರಾಮದಲ್ಲಿ ಕುಡುಕನೊಬ್ಬ ತನ್ನ ತಮ್ಮನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ದ್ರುಟ್‌ಜೆತ್‌ನಲ್ಲಿರುವ ದುಧ್ವಾಖರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ..

ಅತ್ಯಾಚಾರ
ಅತ್ಯಾಚಾರ

By

Published : Feb 6, 2022, 9:21 PM IST

ಚುರು (ರಾಜಸ್ಥಾನ) :ಕುಡುಕ ಅಣ್ಣನೊಬ್ಬ ತನ್ನ ಕಿರಿಯ ಸಹೋದರನ ಪತ್ನಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಚುರು ಗ್ರಾಮದಲ್ಲಿ ಭಾನುವಾರ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಅಪರಾಧಿ ಮದ್ಯದ ಅಮಲಿನಲ್ಲಿ ಈ ಕೃತ್ಯವೆಸಗಿದ್ದಾನೆ. ಅಲ್ಲದೇ ಸಂತ್ರಸ್ತೆ ವಿರೋಧಿಸಿದಾಗ ಆಕೆಯ ಎರಡು ತಿಂಗಳ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಘಟನೆಯ ನಂತರ ಸಂತ್ರಸ್ತೆ ದ್ರುಟ್ಜೆತ್‌ನ ದುಧ್ವಾಖರಾ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ. ಐಪಿಸಿ ಸೆಕ್ಷನ್ 450,376,506,354 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕಾರು- ಲಾರಿ ನಡುವೆ ಭೀಕರ ಅಪಘಾತ : 9 ಜನರ ದುರ್ಮರಣ

ಸಬ್ ಇನ್ಸ್‌ಪೆಕ್ಟರ್ ಸುಮನ್ ಶೇಖಾವತ್ ಮಾತನಾಡಿ, ಫೆಬ್ರವರಿ 5ರಂದು ರಾತ್ರಿ ಸಂತ್ರಸ್ತೆ ಮನೆಯಲ್ಲಿದ್ದಾಗ, ಕುಡಿದ ಅಮಲಿನಲ್ಲಿ ಆಕೆಯ ಭಾವ ಮನೆಗೆ ನುಗ್ಗಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ.

ಸಂತ್ರಸ್ತೆ ವಿರೋಧಿಸಿದಾಗ ಆರೋಪಿ ಆಕೆಯ ಎರಡು ತಿಂಗಳ ಹೆಣ್ಣು ಮಗುವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ಪತಿ ಜಮೀನಿನಲ್ಲಿ ಇದ್ದು, ಆಕೆ ಮತ್ತು ಆಕೆಯ ಮಗಳು ಮಾತ್ರ ಮನೆಯಲ್ಲಿ ಇದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಶೇಖಾವತ್ ಹೇಳಿದ್ದಾರೆ.

ABOUT THE AUTHOR

...view details