ಭೋಪಾಲ್ (ಮಧ್ಯಪ್ರದೇಶ):ಎದೆ ಹಾಲು ಕುಡಿಯುವ ಎರಡು ವರ್ಷದ ಮಗುವಿಗೆ 22 ವರ್ಷದ ಯುವಕನೊಬ್ಬ ಮದ್ಯ ಕುಡಿಸಿದ್ದಾನೆ. ಈ ಘಟನೆ ಇಲ್ಲಿನ ಅಶೋಕ್ ಗಾರ್ಡನ್ ನಗರದಲ್ಲಿ ನಡೆದಿದೆ.
ಅಶೋಕ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯ ರೂಪನಗರದಲ್ಲಿ ವಾಸಿಸುವ ಸಂದೀಪ್ ಭಾಟಿಯಾ ಅಲಿಯಾಸ್ ಛೋಟು ಲಂಗಾ ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಪಕ್ಕದ ಮನೆಯ ಎರಡು ವರ್ಷದ ಮಗುವನ್ನು ತಿಂಡಿ ತಿನಿಸುವ ನೆಪದಲ್ಲಿ ಹೊರಗೆ ಕರೆದೊಯ್ದಿದ್ದಾನೆ. ಈ ವೇಳೆ ಆತ ಮಗುವಿಗೆ ಮದ್ಯ ಕುಡಿಸಿದ್ದಾನೆ. ಬಳಿಕ ಮಗುವಿನ ಆರೋಗ್ಯ ಕ್ಷೀಣಿಸುತ್ತಾ ಹೋಗಿದೆ. ಇದರಿಂದ ಹೆದರಿದ ಆರೋಪಿ ಮಗುವನ್ನು ತಾಯಿಯ ಬಳಿ ಬಿಟ್ಟು ಪರಾರಿಯಾಗಿದ್ದ.