ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ನಡೆದ ಪುರಸಭೆ ಚುನಾವಣೆಗಳಲ್ಲಿ ಕುಡುಕನೊಬ್ಬ ತನ್ನ ಮತ ಚಲಾಯಿಸಿದ್ದಾನೆ. ಆದರೆ, ಆತ ಮತ ಪೆಟ್ಟಿಗೆಯಲ್ಲಿ ಒಂದು ಪತ್ರವನ್ನೂ ಹಾಕಿದ್ದಾನೆ. ಹೊಸ ಬ್ರಾಂಡ್ ಬದಲಿಗೆ ಹಳೆಯ ಬ್ರಾಂಡ್‌ಗಳ ಮದ್ಯ ಲಭ್ಯವಾಗುವಂತೆ ಮಾಡಿ ಎಂದು ಸಿಎಂ ಜಗನ್‌ಗೆ ವಿನಂತಿಸಿ ಪತ್ರ ಬರೆದಿದ್ದಾನೆ.
ಹಳೆಯ ಬ್ರಾಂಡ್‌ಗಳ ಮದ್ಯ ಲಭ್ಯವಾಗುವಂತೆ ಮಾಡಿ: ಮತಪೆಟ್ಟಿಗೆಯಲ್ಲಿ ಸಿಕ್ತು ಕುಡುಕನ ಮನವಿ ಪತ್ರ - andrapradesh latest nes
ಮತ ಪೆಟ್ಟಿಗೆಯಲ್ಲಿ ಕುಡುಕ ಒಂದು ಪತ್ರ ಹಾಕಿದ್ದಾನೆ. ಹೊಸ ಬ್ರಾಂಡ್ ಬದಲಿಗೆ ಹಳೆಯ ಬ್ರಾಂಡ್‌ಗಳ ಮದ್ಯ ಲಭ್ಯವಾಗುವಂತೆ ಮಾಡಿ ಎಂದು ಸಿಎಂ ಜಗನ್‌ಗೆ ವಿನಂತಿಸಿ ಪತ್ರ ಬರೆದಿದ್ದಾನೆ.
ಮತಪೆಟ್ಟಿಗೆಯಲ್ಲಿ ಸಿಕ್ಕಿತು ಕುಡುಕನ ಮನವಿ ಪತ್ರ
ನಂದ್ಯಾಲಾ ಕುಡುಕರ ಕೋರಿಕೆ ಎಂಬ ಶೀರ್ಷಿಕೆಯೊಂದಿಗೆ ಮತಪೆಟ್ಟಿಗೆಯಲ್ಲಿ ಈ ಪತ್ರ ಹಾಕಲಾಗಿದೆ. ಎಣಿಕೆಯ ಸಮಯದಲ್ಲಿ ಮತದಾನದ ಸಿಬ್ಬಂದಿ ಈ ಪತ್ರವನ್ನು ಗಮನಿಸಿದ್ದಾರೆ. ಕರ್ನೂಲ್ ಜಿಲ್ಲೆಯ ನಂದ್ಯಾಲಾದ 29 ನೇ ವಾರ್ಡ್‌ನಲ್ಲಿ ಮತ ಎಣಿಕೆ ವೇಳೆ ಈ ಘಟನೆ ನಡೆದಿದೆ.