ಬಾಲಸೋರ್ :ಕುಡಿದ ಮತ್ತಿನಲ್ಲಿದ್ದ ಮಗನೊಬ್ಬ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಖೈರಾ ಬ್ಲಾಕ್ನ ಮಿರಿಪುರ್ ಖೈರಾ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ವರದಿಯ ಪ್ರಕಾರ, ಗ್ರಾಮದ ರಘುನಾಥ್ ಸಿಯಾಲ್ ಅವರ ಕಿರಿಯ ಮಗ ಜಗಬಂಧು ಸಿಯಾಲ್ ಅಲಿಯಾಸ್ ಬಾಗಾ ಕಳೆದ ರಾತ್ರಿ ಕುಡಿದು ಮನೆಗೆ ಮರಳಿದ್ದಾನೆ. ಈ ಘಟನೆ ಅವರ ಕುಟುಂಬದಲ್ಲಿ ವಾಗ್ವಾದಕ್ಕೆ ಕಾರಣವಾಯಿತು. ಕೋಪದಿಂದ ಜಗಬಂಧು ಕೋಲು ಮತ್ತು ಚಾಕುವಿನಿಂದ ತನ್ನ ಕುಟುಂಬ ಸದಸ್ಯರ ಮೇಲೆ ಹಲ್ಲೆ ಮಾಡಿದ್ದಾನೆ.
ಹಲ್ಲೆಗೊಳಗಾದ ತಂದೆ ಮತ್ತು ಸಹೋದರಿ ಜಸೋಧಾ ಸಿಯಾಲ್ ಭಯದಿಂದ ಮನೆಯಿಂದ ಹೊರಗೆ ಓಡಿಹೋಗಿದ್ದಾರೆ. ಆದ್ರೆ, ಜಗಬಂಧು ಅವರ ತಾಯಿ ಮಣಿ ಸಿಯಾಲ್ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದ ತಾಯಿ ಮಣಿ ಸಿಯಾಲ್ ಸಾವನ್ನಪ್ಪಿದ್ದಾರೆ. ತಾಯಿ ಮಣಿ ಸಿಯಾಲ್ ಮೃತ ದೇಹ ಅರೆನಗ್ನ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಯಾಗಿದೆ.
ಈ ಘಟನೆ ಕುರಿತು ಕುಟುಂಬ ಸದಸ್ಯರ ಬಾಲಸೋರ್ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಜಗಬಂಧುನನ್ನು ಗುರುವಾರ ಬಂಧಿಸಿ ಠಾಣೆಗೆ ಕರೆದೊಯ್ದರು. ಈ ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.