ಗ್ವಾಲಿಯರ್(ಮಧ್ಯಪ್ರದೇಶ):ಕಂಠಪೂರ್ತಿ ಮದ್ಯ ಸೇವಿಸಿದ್ದ ಮಾಡೆಲ್ವೋರ್ವಳು ರಾತ್ರಿವೇಳೆ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹೈಡ್ರಾಮಾ ಸೃಷ್ಟಿಸಿದಳು.
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಮುಂಭಾಗದಲ್ಲಿನ ರಸ್ತೆಯಲ್ಲಿ ವಾಹನ ನಿಲ್ಲಿಸಿ, ಜನರೊಂದಿಗೆ ಜಗಳವಾಡಿದ್ದಾಳೆ. ಇದೇ ವೇಳೆ ಹಾದುಹೋಗುತ್ತಿದ್ದ ಸೇನಾ ವಾಹನ ತಡೆದು, ಅದರ ಹೆಡ್ಲೈಟ್ ಒಡೆದು ಹಾಕಿದ್ದಾಳೆ. ಈ ವೇಳೆ ಯೋಧನೋರ್ವ ತಡೆಯಲು ಪ್ರಯತ್ನಿಸಿದಾಗ ಆತನನ್ನೂ ದೂರ ತಳ್ಳಿದ್ದಾಳೆ.