ಗುವಾಹಟಿ (ಅಸ್ಸೋಂ) :ಗುವಾಹಟಿ ಕ್ರಮೇಣ ಡ್ರಗ್ಸ್ ಟ್ರಾಫಿಕಿಂಗ್ ಕಾರಿಡಾರ್ ಆಗಿ ಮಾರ್ಪಟ್ಟಿದೆ. ಉತ್ತರ ಗುವಾಹಟಿಯ ಭೇತಮುಖ ನಯನಪಾರಾದಲ್ಲಿ ಮಂಗಳವಾರ ನಗರ ಪೊಲೀಸರು ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಸುಮಾರು 15 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಕಾರ್ಯಾಚರಣೆಯ ಸಮಯದಲ್ಲಿ ತಪ್ಪಿಸಿಕೊಳ್ಳಲು ಮುಂದಾದ ಮಾದಕವಸ್ತು ಕಳ್ಳಸಾಗಣೆದಾರರನ್ನು ಹಿಡಿಯಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ಇಬ್ಬರನ್ನು ಬಂಧಿಸಿದ್ದಾರೆ.
ಉತ್ತರ ಗುವಾಹಟಿಯ ಭೇತಮುಖದಲ್ಲಿ ಇಂದು ಬೆಳಗ್ಗೆ ಡಿಐಜಿ ಪಾರ್ಥ ಸಾರಥಿ ಮಹಾಂತ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಕಾಮರೂಪ್, ಕಲ್ಯಾಣ್ ಪಾಠಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಡ್ರಗ್ ದಂಧೆಕೋರರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಅಕ್ರಮ ದಂಧೆಯಲ್ಲಿ ತೊಡಗಿರುವ ಆರೋಪದ ಮೇಲೆ ಕ್ರಮವಾಗಿ ಇಬ್ಬರು ಡ್ರಗ್ ಪೆಡ್ಲರ್ಗಳಾದ ಸೋನು ಅಲಿ ಮತ್ತು ಅರ್ಜುನ್ ಬಾಸ್ಫರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಪೂರೈಕೆದಾರರು ಗುವಾಹಟಿಯ ಗರಿಗಾಂವ್ ಪ್ರದೇಶದವರು ಎಂಬುದಾಗಿ ತಿಳಿದು ಬಂದಿದೆ. ನೆರೆಯ ರಾಜ್ಯ ಮಣಿಪುರದಿಂದ ಡ್ರಗ್ಸ್ ಪೂರೈಕೆಯಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮಾದಕ ವಸ್ತು ಸಾಗಾಟಕ್ಕೆ ಬಳಸುತ್ತಿದ್ದ ಎರಡು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.