ಕೋಲ್ಕತ್ತಾ: ಕೋಲ್ಕತ್ತಾದ ಗೋದಾಮಿನಲ್ಲಿ ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸದಸ್ಯರು 30 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಈ ಘಟನೆಯಲ್ಲಿ ಮೂವರನ್ನು ಬಂಧಿಸಿದ್ದಾರೆ.
30 ಕೋಟಿ ರೂಪಾಯಿಗಳ ನಿಷೇಧಿತ ಡ್ರಗ್ಸ್ ಪತ್ತೆ.. ಮೂವರ ಬಂಧನ - ಈಟಿವಿ ಭಾರತ ಕನ್ನಡ
ಎಸ್‌ಟಿಎಫ್ ಮೂಲಗಳ ಪ್ರಕಾರ, ಕೋಲ್ಕತ್ತಾದ ಗೋದಾಮಿನಲ್ಲಿ 3600.7 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಹೆಸರು ಗಸಗಸೆ ಸ್ಟ್ರಾ. ಇದು ವಾಸ್ತವವಾಗಿ ಒಂದು ರೀತಿಯ ಅಫೀಮು ಆಗಿದೆ.
30 ಕೋಟಿ ರೂಪಾಯಿಗಳ ನಿಷೇಧಿತ ಡ್ರಗ್ಸ್ ಪತ್ತೆ
ಬಂಧಿತರನ್ನು ಸುಲ್ತಾನ್ ಅಹ್ಮದ್, ಮೊಹಮ್ಮದ್ ಕಲೀಂ ಮತ್ತು ಫಿರೋಜ್ ಆಲಂ ಎಂದು ಗುರುತಿಸಲಾಗಿದೆ. ಎಸ್‌ಟಿಎಫ್ ಮೂಲಗಳ ಪ್ರಕಾರ, ಕೋಲ್ಕತ್ತಾದ ಗೋದಾಮಿನಲ್ಲಿ 3600.7 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಹೆಸರು ಗಸಗಸೆ ಸ್ಟ್ರಾ. ಇದು ವಾಸ್ತವವಾಗಿ ಒಂದು ರೀತಿಯ ಅಫೀಮು ಎಂದು ಮೂಲಗಳು ತಿಳಿಸಿವೆ.