ಕರ್ನಾಟಕ

karnataka

ETV Bharat / bharat

ಶ್ರದ್ಧಾ ​ಹತ್ಯೆ ಪ್ರಕರಣ: ಅಫ್ತಾಬ್‌ಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದವ ಸೆರೆ - Drug peddler Faisal Momin

ಆರೋಪಿ ಅಫ್ತಾಬ್‌ಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಶೋಧಿಸಿ ಬಂಧಿಸಲಾಗಿದೆ. ಆಘಾತಕಾರಿ ಸಂಗತಿಯೇನೆಂದರೆ ಈ ಮಾದಕ ದ್ರವ್ಯ ದಂಧೆಕೋರ ಸೂರತ್ ನಿವಾಸಿ ಎಂಬುದು ಬೆಳಕಿಗೆ ಬಂದಿದೆ.

A drug peddler linked to Aftab was arrested from Surat
ಶ್ರದ್ಧಾ ​ಹತ್ಯೆ ಪ್ರಕರಣ: ಅಫ್ತಾಬ್‌ಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದವನ ಬಂಧನ

By

Published : Nov 28, 2022, 3:40 PM IST

ಸೂರತ್‌: ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣದ ತನಿಖೆ ಚುರುಕಾಗಿಯೇ ನಡೆಯುತ್ತಿದೆ. ಈಗ ಆರೋಪಿ ಅಫ್ತಾಬ್‌ಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಾದಕ ದ್ರವ್ಯ ದಂಧೆಕೋರ ಸೂರತ್ ನಿವಾಸಿ ಎಂದು ತಿಳಿದುಬಂದಿದೆ.

ಡ್ರಗ್ ಪೆಡ್ಲರ್ ಫೈಸಲ್ ಮೊಮಿನ್ ಆರೋಪಿ. ಈತನನ್ನು ಪಾಂಡೆಸರಾ ಮತ್ತು ಅಮ್ರೋಲಿಯಲ್ಲಿ 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಮೊಮಿನ್ ಅಫ್ತಾಬ್​ಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂದು ತಿಳಿದು ಬಂದ ನಂತರ ಪೊಲೀಸರು ಫೈಸಲ್ ಮೊಮಿನ್ ಫೋನ್‌ ಕರೆ ದಾಖಲೆಗಳನ್ನು ತನಿಖೆ ಮಾಡಿದ್ದರು.

ಇದಾಗಿ ಫೈಸಲ್‌ನ​ನ್ನು ಸೂರತ್ ಕ್ರೈಂ ಬ್ರಾಂಚ್ ನಾಲ್ಕು ದಿನಗಳ ಹಿಂದೆ ಬಂಧಿಸಿದೆ. ಪ್ರಸ್ತುತ ಫೈಸಲ್ ಮೊಮಿನ್ ಸೂರತ್‌ನ ಲಜ್‌ಪೋರ್ ಜೈಲಿನಲ್ಲಿದ್ದಾನೆ.

ಇದನ್ನೂ ಓದಿ:ಸೂರತ್​ನಲ್ಲಿ ಪಿಎಂ ಮೋದಿ ಪ್ರಚಾರ: ಡೈಮಂಡ್​ ವ್ಯಾಪಾರಿಗಳು, ಪಾಟಿದಾರ್ ಮುಖಂಡರ ಭೇಟಿ

ABOUT THE AUTHOR

...view details