ಕರ್ನಾಟಕ

karnataka

ETV Bharat / bharat

ರಾಷ್ಟ್ರಪತಿ ಚುನಾವಣೆ ಗೆದ್ದ ದ್ರೌಪದಿ ಮುರ್ಮು.. ಅಭಿನಂದನೆ ಸಲ್ಲಿಸಿದ ಎದುರಾಳಿ ಅಭ್ಯರ್ಥಿ ಯಶವಂತ್ ಸಿನ್ಹಾ - ರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದ ದ್ರೌಪದಿ ಮುರ್ಮು

ದೇಶದ 16ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಇಂದು ನಡೆದ ಮತ ಎಣಿಕೆ ಕಾರ್ಯದಲ್ಲಿ ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಪ್ರಥಮ ಬುಡಕಟ್ಟು ಮಹಿಳೆ ಎಂಬ ಸಾಧನೆ ಮಾಡಿದ್ದಾರೆ.

Droupadi murmu historic win in presidential race
Droupadi murmu historic win in presidential race

By

Published : Jul 21, 2022, 7:59 PM IST

Updated : Jul 21, 2022, 8:09 PM IST

ನವದೆಹಲಿ:ನೂತನ ರಾಷ್ಟ್ರಪತಿ ಆಯ್ಕೆಯ ಮತ ಎಣಿಕೆಯಲ್ಲಿ ಎನ್​​ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಭರ್ಜರಿ ಗೆಲುವು ದಾಖಲು ಮಾಡಿದ್ದು, ದೇಶದ 16ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಈ ಹುದ್ದೆ ಅಲಂಕಾರ ಮಾಡಿರುವ ಬುಡಕಟ್ಟು ಸಮುದಾಯದ ಪ್ರಥಮ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ದ್ರೌಪದಿ ಮುರ್ಮು ಅವರು ವಿಜೇತರಾಗಿ ಹೊರಹೊಮ್ಮುತ್ತಿರುವಂತೆ ದೇಶದ ವಿವಿಧ ಕಡೆಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅವರ ತವರು ರಾಜ್ಯ ಒಡಿಶಾದಲ್ಲಿ ಇಂದು ಬೆಳಗ್ಗೆಯಿಂದಲೇ ಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದಾರೆ. ಮುರ್ಮು ಅವರು ದೇಶದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗಿದ್ದಾರೆ ಮತ್ತು ಅತ್ಯುನ್ನತ ಹುದ್ದೆ ಅಲಂಕರಿಸಿದ ದೇಶದ ಎರಡನೇ ಮಹಿಳೆಯಾಗಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ 44 ಪಕ್ಷಗಳು ಬೆಂಬಲ ಘೋಷಣೆ ಮಾಡಿದ್ದವು. ಇನ್ನು ಯಶವಂತ್ ಸಿನ್ಹಾ ಅವರಿಗೆ 34 ಪಕ್ಷಗಳ ಬೆಂಬಲವಿತ್ತು. ಚುನಾವಣೆ ಸಂದರ್ಭದಲ್ಲಿ ಶಿವಸೇನೆ, ಜೆಡಿಎಸ್​​ ಸಹ ಮುರ್ಮು ಅವರಿಗೆ ಸಪೋರ್ಟ್ ಮಾಡಿದ್ದರಿಂದ ಗೆಲುವು ಮತ್ತಷ್ಟು ಸುಲಭವಾಗಿತ್ತು. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ದ್ರೌಪದಿ ಮುರ್ಮು 540 ಮತ ಪಡೆದುಕೊಂಡಿದ್ದರು.

ಅದೇ ವೇಳೆ ಯಶವಂತ್​ ಸಿನ್ಹಾ ಅವರಿಗೆ 208 ಮತಗಳು ಲಭಿಸಿದ್ದವು. ಇನ್ನೂ ಎರಡನೇ ಸುತ್ತಿನ ವೇಳೆ ಮುರ್ಮು 809 ಮತ ಪಡೆದುಕೊಂಡಿದ್ದು, ಯಶವಂತ್ ಸಿನ್ಹಾ 329 ಮತ ಪಡೆದುಕೊಂಡಿದ್ದರು.

ಮೂರನೇ ಸುತ್ತಿನಲ್ಲಿ ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್​, ಒಡಿಶಾ ರಾಜ್ಯಗಳ ಶಾಸಕರ ಮತ ಎಣಿಕೆ ಮಾಡಲಾಗುತ್ತಿದ್ದು, ಇತ್ತೀಚಿನ ವರದಿ ಪ್ರಕಾರ ಮುರ್ಮು 812 ಮತ ಪಡೆದರೆ ಸಿನ್ಹಾ 521 ಮತಗಳನ್ನು ಪಡೆದಿದ್ದಾರೆ.ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಈಗಾಗಲೇ ಶೇ. 50ಕ್ಕಿಂತಲೂ ಹೆಚ್ಚಿನ ಮತ ಪಡೆದುಕೊಂಡಿದ್ದು, ಗೆಲುವು ಖಚಿತಗೊಂಡಿದೆ.

ಅಭಿನಂದನೆ ಸಲ್ಲಿಸಿದ ರಾಜನಾಥ್ ಸಿಂಗ್​:ರಾಷ್ಟ್ರಪತಿ ಚುನಾವಣೆಯಲ್ಲಿ ಎನ್​ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ದಾಖಲು ಮಾಡುತ್ತಿದ್ದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಯಶವಂತ್ ಸಿನ್ಹಾ ಶುಭ ಹಾರೈಕೆ:2022ರ ರಾಷ್ಟ್ರಪತಿ ಚುನಾವಣೆಯಲ್ಲಿ ಜಯಗಳಿಸಿದ ದ್ರೌಪದಿ ಮುರ್ಮು ಅವರನ್ನ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ದೇಶದ 15ನೇ ರಾಷ್ಟ್ರಪತಿಯಾಗಿ ಯಾವುದೇ ಭಯ ಅಥವಾ ಯಾರದೇ ಪರವಾಗಿಲ್ಲದೇ ಕಾರ್ಯನಿರ್ವಹಿಸುತ್ತಾರೆಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

Last Updated : Jul 21, 2022, 8:09 PM IST

ABOUT THE AUTHOR

...view details