ನವದೆಹಲಿ:ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಮೇಲೆ ಡ್ರೋಣ್ ಹಾರಾಟ ನಡೆಸಿದ್ದು, ಈ ಬೆಳವಣಿಗೆಯನ್ನು ಭಾರತ ಖಂಡಿಸಿದೆ. ಜತೆಗೆ ಡ್ರೋಣ್ ಹಾರಾಟ ಹಿಂದೆ ಅಲ್ಲಿನ ಉಗ್ರ ಸಂಘಟನೆಗಳ ಕೈವಾಡವಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಭಾರತೀಯ ಹೈಕಮಿಷನ್ ಕಚೇರಿ ಕಟ್ಟಡದ ಮೇಲೆ ಡ್ರೋಣ್ ಹಾರಾಟ ನಡೆಸಿರುವುದು ಭದ್ರತೆಯ ಲೋಪವಾಗಿದ್ದು, ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಳೆದ ಜೂನ್ 27ರಂದು ಭಾರತ-ಪಾಕ್ನ ಗಡಿ ಭಾಗದ ಜಮ್ಮು ಕಾಶ್ಮೀರದ ವಾಯಸೇನಾ ನೆಲೆಗಳ ಮೇಲೆ ಡ್ರೋಣ್ ದಾಳಿ ನಡೆದಿತ್ತು. ಇದಾದ ಬಳಿಕ ಗಡಿ ಭಾಗಗಳಲ್ಲಿ ಮೇಲಿಂದ ಮೇಲೆ ಡ್ರೋಣ್ ಪತ್ತೆಯಾಗುತ್ತಿದೆ. ಡ್ರೋಣ್ ಹಾರಾಟದ ಹಿಂದೆ ಪಾಕ್ ಮೂಲದ ಉಗ್ರ ಸಂಘಟನೆಗಳಾಗಿರುವ ಜೈಶ್- ಇ-ಮೊಹಮ್ಮದ್ ಹಾಗೂ ಲಷ್ಕರ್-ಇ-ತೊಯ್ಬಾ ಕೈವಾಡವಿರಬಹುದು ಎಂಬ ಅನುಮಾನ ದಟ್ಟವಾಗಿದೆ.