ಕರ್ನಾಟಕ

karnataka

ETV Bharat / bharat

ಸ್ವಾಮಿತ್ವ ಯೋಜನೆಗಾಗಿ ಒಂದು ಸಾವಿರ ಗ್ರಾಮಗಳ ಸರ್ವೆ ಮಾಡಿದ ಗರುಡಾ ಏರೋಸ್ಪೇಸ್ - ಉತ್ತರ ಪ್ರದೇಶದಲ್ಲಿ ಒಂದು ಸಾವಿರ ಗ್ರಾಮಗಳ ಮ್ಯಾಪಿಂಗ್ ಮಾಡಿದ ಗರುಡಾ ಏರೋಸ್ಪೇಸ್

ತಮಿಳುನಾಡಿನ ಚೆನ್ನೈ ಮೂಲದ ಡ್ರೋನ್ ಸಂಬಂಧಿ ಸೇವೆಗಳ ಕಂಪನಿಯಾದ ಗರುಡಾ ಏರೋಸ್ಪೇಸ್ ಉತ್ತರ ಪ್ರದೇಶದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗ್ರಾಮಗಳ ಸರ್ವೆ ಕಾರ್ಯ ಪೂರ್ಣಗೊಳಿಸಿದೆ.

Drone maker Garuda Aerospace maps 1,000 villages in Uttar Pradesh under Centre's Svamitva scheme
ಸ್ವಾಮಿತ್ವ ಯೋಜನೆಗಾಗಿ ಒಂದು ಸಾವಿರ ಗ್ರಾಮಗಳ ಸರ್ವೆ ಮಾಡಿದ ಗರುಡಾ ಏರೋಸ್ಪೇಸ್

By

Published : Jan 4, 2022, 11:54 AM IST

ನವದೆಹಲಿ:ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಭಾಗವಾಗಿ ಉತ್ತರ ಪ್ರದೇಶದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಗ್ರಾಮಗಳ ಮ್ಯಾಪಿಂಗ್ ಅನ್ನು ಡ್ರೋನ್ ಸಂಬಂಧಿ ಸೇವೆಗಳ ಕಂಪನಿಯಾದ, ಚೆನ್ನೈ ಮೂಲದ ಗರುಡಾ ಏರೋಸ್ಪೇಸ್​ ಪೂರ್ಣಗೊಳಿಸಿದೆ.

ಈ ಕುರಿತು ಮಾತನಾಡಿದ ಗರುಡಾ ಏರೋಸ್ಪೇಸ್‌ನ ಸಂಸ್ಥಾಪಕ ಸಿಇಒ ಅಗ್ನಿಶ್ವರ್ ಜಯಪ್ರಕಾಶ್ ಮಾತನಾಡಿ, ಕಳೆದ ವರ್ಷ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಬಿಡುಗಡೆ ಮಾಡಿದ ಡ್ರೋನ್ ನಿಯಮಗಳನ್ನು ಸಡಿಲಗೊಳಿಸಿದ್ದು, ಈ ನಿಯಮಗಳಿಂದ ನಮ್ಮ ಸಂಸ್ಥೆ ಹೆಚ್ಚು ಪ್ರಯೋಜನ ಪಡೆದಿದೆ ಎಂದರು.

ಈಗ ಇಲ್ಲಿ ತಯರಾಗುತ್ತಿರುವ ಡ್ರೋನ್​ಗಳಿಗೆ ಮಲೇಷ್ಯಾ, ಪನಾಮ, ಯುಎಇ ಮತ್ತು ಇತರ ಕೆಲವು ದೇಶಗಳಿಂದ ಬೇಡಿಕೆ ಬರುತ್ತಿದೆ. ಈ ವರ್ಷದ ಮಾರ್ಚ್ 31ರ ವೇಳೆಗೆ ಗರುಡಾ ಏರೋಸ್ಪೇಸ್ 15 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ ಎಂದು ಜಯಪ್ರಕಾಶ್ ಹೇಳಿದ್ದಾರೆ.

ನಾವು ಮಲೇಷ್ಯಾ, ಪನಾಮಾ ಮತ್ತು ಯುಎಇಯಿಂದ ಇದುವರೆಗೆ 8 ಸಾವಿರ ಡ್ರೋನ್‌ಗಳಿಗೆ ಆರ್ಡರ್ ಪಡೆದುಕೊಂಡಿದ್ದೇವೆ. ಮಾರ್ಚ್ 31ರೊಳಗೆ ನಮ್ಮ ವಹಿವಾಟನ್ನು ತಿಂಗಳಿಗೆ 15-20 ಕೋಟಿಗಳಿಗೆ ಹೆಚ್ಚಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ನಾವು 2023ರ ವೇಳೆಗೆ ಡ್ರೋನ್ ವಲಯವು ಮೊದಲ ಯೂನಿಕಾರ್ನ್ ಸ್ಟಾರ್ಟ್ಅಪ್ ಆಗುವ ಸಾಧ್ಯತೆ ನಿರೀಕ್ಷಿಸಲಾಗುತ್ತಿದೆ. ಈಗ ಸ್ವಾಮಿತ್ವ ಯೋಜನೆಯಡಿ ಸಾವಿರಕ್ಕೂ ಹೆಚ್ಚು ಗ್ರಾಮಗಳ ಮ್ಯಾಪಿಂಗ್ ಮಾಡಲಾಗಿದೆ ಎಂದು ಜಯಪ್ರಕಾಶ್ ಹೇಳಿದ್ದಾರೆ.

ಸ್ವಾಮಿತ್ವ ಯೋಜನೆಯ ಬಗ್ಗೆ

ಸ್ವಾಮಿತ್ವ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 2021ರ ಏಪ್ರಿಲ್​ನಲ್ಲಿ ಪ್ರಧಾನಿ ಮೋದಿ ಈ ಯೋಜನೆ ಜಾರಿಗೆ ತಂದರು. ಈ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನರ ಆಸ್ತಿಯನ್ನು ಸರ್ವೆ ಮಾಡಿ, ಅವರಿಗೆ ದಾಖಲಾತಿಗಳನ್ನು ಒದಗಿಸಿಕೊಡುವುದಾಗಿದೆ.

2021ರಿಂದ 2025ರೊಳಗೆ ಸುಮಾರು 6.62 ಲಕ್ಷ ಗ್ರಾಮಗಳನ್ನು ಈ ಯೋಜನೆ ಮೂಲಕ ಸರ್ವೆ ಮಾಡಲಾಗುತ್ತದೆ. ಈಗ ಉತ್ತರ ಪ್ರದೇಶದಲ್ಲಿ ಗರುಡಾ ಏರೋಸ್ಪೇಸ್ ಸುಮಾರು ಸಾವಿರ ಗ್ರಾಮಗಳ ಸರ್ವೆ ಕಾರ್ಯ ಪೂರ್ಣಗೊಳಿಸಿದೆ. ಗ್ರಾಮಗಳ ಸರ್ವೆ ಮಾತ್ರವಲ್ಲದೇ ಇನ್ನಿತರ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳಿಂದ ಗರುಡಾ ಏರೋಸ್ಪೇಸ್ ಆರ್ಡರ್ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ:India Corona: 37 ಸಾವಿರ ಹೊಸ ಕೋವಿಡ್ ಕೇಸ್​ಗಳು ಪತ್ತೆ

ABOUT THE AUTHOR

...view details