ಕರ್ನಾಟಕ

karnataka

ETV Bharat / bharat

ಡ್ರೋನ್ ಕರಡು ನಿಯಮ–2021ನ್ನು ಸ್ವಾಗತಿಸಿದ ಡ್ರೋನ್ ಫೆಡರೇಶನ್ ಆಫ್ ಇಂಡಿಯಾ - ಚಾಲ್ತಿ ನಿಯಮಗಳಲ್ಲಿ ಡ್ರೋನ್‌ಗಳ ಗಾತ್ರ ಮತ್ತು ತೂಕ

ಹೊಸ ಕರಡು ನಿಯಮಗಳ ಪ್ರಕಾರ, ಡ್ರೋನ್ ವ್ಯಾಪ್ತಿಯನ್ನು 300 ಕೆಜಿಯಿಂದ 500 ಕೆಜಿಗೆ ಹೆಚ್ಚಿಸಲಾಗಿದೆ. ಹಾಗೆ ಹಲವಾರು ಮಾರ್ಪಾಡುಗಳನ್ನು ಮಾಡಲಾಗಿದೆ..

ಡ್ರೋನ್ ಕರಡು ನಿಯಮ–2021ನ್ನು ಸ್ವಾಗತಿಸಿದ  ಡ್ರೋನ್ ಫೆಡರೇಶನ್ ಆಫ್ ಇಂಡಿಯಾ
ಡ್ರೋನ್ ಕರಡು ನಿಯಮ–2021ನ್ನು ಸ್ವಾಗತಿಸಿದ ಡ್ರೋನ್ ಫೆಡರೇಶನ್ ಆಫ್ ಇಂಡಿಯಾ

By

Published : Jul 16, 2021, 10:10 PM IST

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ ಡ್ರೋನ್ ಕರಡು ನಿಯಮ–2021ಅನ್ನು ಡ್ರೋನ್ ಫೆಡರೇಶನ್ ಸ್ವಾಗತಿಸಿದೆ. ಹಾಗೆ ಭಾರತೀಯ ಡ್ರೋನ್ ಉದ್ಯಮದ ಬೆಳವಣಿಗೆಗೆ ಈ ನಿಯಮಗಳು ಪ್ರಮುಖವಾಗಿವೆ ಎಂದು ಹೇಳಿದೆ.

ಜಮ್ಮುವಿನಲ್ಲಿ ಇತ್ತೀಚೆಗೆ ನಡೆದ ಡ್ರೋನ್ ಘಟನೆಗಳ ನಂತರವೂ ಡ್ರೋನ್ ನೀತಿಯನ್ನು ಉದಾರೀಕರಣಗೊಳಿಸುವ ನಾಗರಿಕ ವಿಮಾನಯಾನ ಸಚಿವಾಲಯದ ನಿರ್ಧಾರವು ಡ್ರೋನ್ ಬಳಕೆಯನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಯತ್ತ ಗಮನ ಹರಿಸುವ ಸರ್ಕಾರದ ದಿಟ್ಟ ವಿಧಾನವನ್ನು ತೋರಿಸುತ್ತದೆ ಎಂದು ಡ್ರೋನ್ ಫೆಡರೇಶನ್ ಆಫ್ ಇಂಡಿಯಾ ನಿರ್ದೇಶಕ ಸ್ಮಿತ್ ಶಾ ಸರ್ಕಾರವನ್ನು ಪ್ರಶಂಸಿದ್ದಾರೆ.

ಡ್ರೋನ್ ಕರಡು ನಿಯಮ–2021ನ್ನು ಸ್ವಾಗತಿಸಿದ ಡ್ರೋನ್ ಫೆಡರೇಶನ್ ಆಫ್ ಇಂಡಿಯಾ

ಸಂಬಂಧಿತ ಲೇಖನ: ಡ್ರೋನ್ ಮೂಲಕ ಔಷಧ ಪೂರೈಕೆ: ಗೌರಿಬಿದನೂರಿನಲ್ಲಿ ದೇಶದ ಮೊದಲ ಪ್ರಯೋಗ

ನಾಗರಿಕ ವಿಮಾನಯಾನ ಸಚಿವಾಲಯವು (MoCA) ಗುರುವಾರ ಸಾರ್ವಜನಿಕ ಸಮಾಲೋಚನೆಗಾಗಿ ನವೀಕರಿಸಿದ ಡ್ರೋನ್ ನಿಯಮಗಳು 2021 ಬಿಡುಗಡೆ ಮಾಡಿದೆ. ಪ್ರಸ್ತುತ ಜಾರಿಯಲ್ಲಿರುವ ಮಾನವರಹಿತ ವಿಮಾನ ವ್ಯವಸ್ಥೆ (ಯುಎಎಸ್) ನಿಯಮಗಳನ್ನು ಮಾರ್ಚ್ 2021ರಲ್ಲಿ ಪ್ರಕಟಿಸಲಾಯಿತು. ಸಾರ್ವಜನಿಕ ಆಕ್ಷೇಪಣೆಗಳನ್ನು ಸ್ವೀಕರಿಸುವ ಆಗಸ್ಟ್ 5, 2021ರ ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ.

ಈ ನಿಯಮಗಳು ಭಾರತೀಯ ಡ್ರೋನ್ ಉದ್ಯಮದ ಬೆಳವಣಿಗೆಗೆ ಪ್ರಮುಖವಾದುದು ಮತ್ತು ವಿವಿಧ ಕೈಗಾರಿಕೆಗಳಲ್ಲಿ ಡ್ರೋನ್‌ಗಳನ್ನು ಅಳವಡಿಸಿಕೊಳ್ಳುವಲ್ಲಿ ಹೆಚ್ಚಳವಾಗಲಿದೆ ಎಂದು ಡ್ರೋನ್ ಫೆಡರೇಶನ್ ಆಫ್ ಇಂಡಿಯಾ ಅಭಿಪ್ರಾಯಪಟ್ಟಿದೆ.

ನೂತನ ನಿಯಮಗಳು :

ಚಾಲ್ತಿ ನಿಯಮಗಳಲ್ಲಿ ಡ್ರೋನ್‌ಗಳ ಗಾತ್ರ ಮತ್ತು ತೂಕದ ಆಧಾರದಲ್ಲಿ ನೋಂದಣಿ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಎಲ್ಲಾ ಡ್ರೋನ್‌ಗಳಿಗೂ ಏಕಪ್ರಕಾರದ ಪ್ರಕ್ರಿಯೆ ಇರುತ್ತದೆ.

ಮಾಲೀಕತ್ವ ಬದಲಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.

ಡ್ರೋನ್‌ಗಳ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಪ್ರಮಾಣಪತ್ರವನ್ನು ಪಡೆಯಬೇಕು. ನಿಗದಿತ ಅವಧಿಗೊಮ್ಮೆ ಈ ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯ. ಆದರೆ, ನೂತನ ಕರಡು ನಿಯಮಗಳಲ್ಲಿ ಈ ಪ್ರಮಾಣ ಪತ್ರ ಪಡೆಯುವ ಅವಶ್ಯಕತೆ ಇಲ್ಲ.

ಡ್ರೋನ್ ಅನ್ನು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಮತ್ತು ಡ್ರೋನ್‌ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಮಾನ್ಯತೆ ಪಡೆಯಬೇಕು ಎಂದಿತ್ತು. ಆದರೆ, ಕರಡು ನಿಯಮಗಳಲ್ಲಿ ಈ ಪ್ರಕ್ರಿಯೆಗಳನ್ನು ರದ್ದುಪಡಿಸಲಾಗಿದೆ.

ಡ್ರೋನ್‌ ಹಾರಾಟ ತರಬೇತುದಾರ ಮತ್ತು ವಿದ್ಯಾರ್ಥಿ ಡ್ರೋನ್‌ ಪೈಲಟ್ ಪರವಾನಿಗೆ ಪಡೆಯವುದು ಕಡ್ಡಾಯ ಎಂದು ಈ ಹಿಂದೆ ತಿಳಿಸಲಾಗಿತ್ತು. ನೂತನ ಕರಡು ನಿಯಮಗಳಲ್ಲಿ ಇದನ್ನು ರದ್ದುಪಡಿಸಲಾಗಿದೆ.

ABOUT THE AUTHOR

...view details