ಡೆಹ್ರಾಡೂನ್(ಉತ್ತರಾಖಂಡ):ಮೇಘಾಲಯದ ಬಳಿಕ ಉತ್ತರಾಖಂಡದಲ್ಲಿ ಡ್ರೋನ್ ಮೂಲಕ ಔಷಧ ಸಾಗಿಸುವ ತುರ್ತು ಸೇವೆಯನ್ನು ಆರಂಭಿಸಲಾಗಿದೆ. ಡೆಹ್ರಾಡೂನ್ ನಗರದಲ್ಲಿ ಡ್ರೋನ್ ಮೂಲಕ ಔಷಧ ಮತ್ತು ತುರ್ತು ವೈದ್ಯಕೀಯ ಸಲಕರಣೆಗಳನ್ನು ಡಿಜಿಟಲ್ ಹೆಲ್ತ್ ಪ್ಲಾಟ್‌ಫಾರ್ಮ್, ಟಾಟಾ 1 ಎಂಜಿ ಕಂಪನಿ ಸರಬರಾಜು ಮಾಡುತ್ತಿದೆ.
ರೇಸ್‌ಕೋರ್ಸ್, ವಸಂತ ವಿಹಾರ್ ಮತ್ತು ಕಿಶನ್‌ನಗರದಲ್ಲಿ ಇದರ ಕೇಂದ್ರಗಳನ್ನು ತೆರೆಯಲಾಗಿದೆ. ಮುಂದೆ ರಾಜ್ಯದ ವಿವಿಧೆಡೆ ಇವುಗಳ ಸಂಖ್ಯೆ ಹೆಚ್ಚಿಸಲಾಗುವುದು. ಡ್ರೋನ್‌ಗಳು 6 ಕೆಜಿ ಔಷಧಗಳನ್ನು 100 ಕಿಮೀ ವ್ಯಾಪ್ತಿಯೊಳಗೆ ತಲುಪಿಸಬಲ್ಲವು. ಡ್ರೋನ್ಗಳಲ್ಲಿ ಔಷಧಗಳ ಸಾಗಣೆಯ ಎಲ್ಲ ಸುರಕ್ಷತೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು 1ಎಂಜಿ ಕಂಪನಿ ತಿಳಿಸಿದೆ.