ತರನ್ ತರನ್ (ಪಂಜಾಬ್):ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೊಂದು ಡ್ರೋನ್ಅನ್ನು ಭದ್ರತಾ ಪಡೆಗಳು ಪತ್ತೆ ಮಾಡಿದ್ದು, ಡ್ರೋನ್ನೊಂದಿಗೆ 3 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್ನ ತರನ್ ತರನ್ ಜಿಲ್ಲೆಯ ವಲ್ತೋಹಾ ಪ್ರದೇಶದಲ್ಲಿ ಪಂಜಾಬ್ ಪೊಲೀಸರು ಹಾಗೂ ಬಿಎಸ್‌ಎಫ್ ಸಿಬ್ಬಂದಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿ ಡ್ರೋನ್ ಪತ್ತೆ ಮಾಡಲಾಗಿದೆ. ಈ ಮೂಲಕ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋ-ಪಾಕ್ ಗಡಿಯಲ್ಲಿರುವ ತರನ್ ತರನ್ ಸಮೀಪದ ಅಮರಕೋಟ್‌ನ ಬಿಒಪಿ ಕಾಲಿಯಾದಲ್ಲಿ ಶನಿವಾರ ರಾತ್ರಿ 11 ಗಂಟೆಗೆ ಡ್ರೋನ್ ಚಲನೆ ಕಂಡುಬಂದಿದೆ. ಬೆಳಗಿನ ಜಾವ 2.30ರ ನಂತರ ಡ್ರೋನ್‌ನ ಸದ್ದು ಕೇಳಿದೆ. ಬಳಿಕ ಯೋಧರು ಗುಂಡು ಹಾರಿಸಲು ಆರಂಭಿಸಿದ್ದು, ಕೆಲ ಹೊತ್ತಿನ ಬಳಿಕ ಡ್ರೋನ್‌ನ ಸದ್ದು ನಿಂತಿತ್ತು ಎಂದು ಮಾಹಿತಿ ನೀಡಿದ್ದಾರೆ.
ಬಿಎಸ್‌ಎಫ್ ಮತ್ತು ಪೊಲೀಸರು ವಾಲ್ಟೋಹಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಶೋಧ ನಡೆಸಿದಾಗ 3 ಕಿಲೋಗ್ರಾಂ ಹೆರಾಯಿನ್‌ನೊಂದಿಗೆ ಕ್ವಾಡ್‌ಕಾಪ್ಟರ್ ಡ್ರೋನ್ ಅನ್ನು ವಶಪಡಿಸಿಕೊಂಡರು ಎಂದು ಪಂಜಾಬ್ ಡಿಜಿಪಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಪಂಜಾಬಿನ ತರನ್‌ತರನ್ ಬಳಿ 5 ಕೆಜಿ ಹೆರಾಯಿನ್ ಜೊತೆ ಡ್ರೋನ್ ಪತ್ತೆ