ಪುಣೆ (ಮಹಾರಾಷ್ಟ್ರ): ಪಿಂಪ್ರಿ-ಚಿಂಚ್ವಾಡ್ ಮಾರ್ಗ ಮಧ್ಯೆ ಬಸ್ನಲ್ಲಿ ಬೆಂಕಿ ಕಾಣಿಸಿತ್ತು. ನಗರದ ದಾಪೋಡಿ ಸೇತುವೆ ಮೇಲೆ ಪಿಎಂಪಿಎಂಎಲ್ ಬಸ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಸಮಯ ಪ್ರಜ್ಞೆಯಿಂದ ಚಾಲಕ 30 ಪ್ರಯಾಣಿಕರ ಜೀವ ರಕ್ಷಣೆ ಮಾಡಿದ್ದಾರೆ.
ಮಾಹಿತಿಯ ಪ್ರಕಾರ, ಪಿಂಪಲ್ ಗುರವ್ನಿಂದ ಪುಣೆ ಕಡೆಗೆ ಹೋಗುತ್ತಿದ್ದ ಬಸ್‌ನ ಇಂಜಿನ್ನಿಂದ ಇದ್ದಕ್ಕಿದ್ದಂತೆ ಹೊಗೆ ಹೊರ ಬರಲು ಆರಂಭಿಸಿದೆ. ಇದನ್ನು ಕಂಡ ಚಾಲಕ ಲಕ್ಷ್ಮಣ್ ಹಜಾರೆ ಕೂಡಲೇ ಬಸ್ ನಿಲ್ಲಿಸಿದ್ದಾರೆ.