ಕರ್ನಾಟಕ

karnataka

ETV Bharat / bharat

ಕೂದಲೆಳೆ ಅಂತರದಲ್ಲಿ ತಪ್ಪಿದ ಮತ್ತೊಂದು ರೈಲು ದುರಂತ​.. ಚಾಲಕನ ಸಮಯ ಪ್ರಜ್ಞೆಯಿಂದ ಬದುಕುಳಿದ ನೂರಾರು ಜೀವಗಳು! - ಅಧಿಕಾರಿಗಳಲ್ಲಿ ಸಂಚಲನ

ಒಡಿಶಾ ರೈಲು ದುರಂತದ ಬಳಿಕ ಮತ್ತೊಂದು ರೈಲು ಅಪಘಾತ ಸಂಭವಿಸುವ ಲಕ್ಷಣ ಜಾರ್ಖಂಡ್​ನಲ್ಲಿ ಕಂಡು ಬಂದಿತ್ತು. ಆದರೆ, ಕೂದಲೆಳೆ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದೆ.

Driver saved Rajdhani Express from accident  Jharkhand News  Bhubaneswar Delhi Rajdhani Express  train accident in bokaro  rajdhani express accident in bokaro  ಕೂದಲೆಳೆ ಅಂತರದಲ್ಲಿ ಮತ್ತೊಂದು ರೈಲು ಅಪಘಾತ ಮಿಸ್  ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿತು ನೂರಾರು ಜೀವ  ಒಡಿಶಾ ರೈಲು ದುರಂತದ ಬಳಿಕ ಮತ್ತೊಂದು ರೈಲು  ರೈಲು ಅಪಘಾತ ಸಂಭವಿಸುವ ಲಕ್ಷಣ ಜಾರ್ಖಂಡ್  ಕೂದಲೆಳೆ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದೆ  ರೈಲ್ವೆ ಕ್ರಾಸಿಂಗ್​ನಲ್ಲಿ ಅಪಘಾತ  ಅಧಿಕಾರಿಗಳಲ್ಲಿ ಸಂಚಲನ  ಗೇಟ್ ಮ್ಯಾನ್ ಅಮಾನತು
ಕೂದಲೆಳೆ ಅಂತರದಲ್ಲಿ ಮತ್ತೊಂದು ರೈಲು ಅಪಘಾತ ಮಿಸ್​

By

Published : Jun 7, 2023, 10:48 AM IST

ಕೂದಲೆಳೆ ಅಂತರದಲ್ಲಿ ಮತ್ತೊಂದು ರೈಲು ಅಪಘಾತ ಮಿಸ್

ಬೊಕಾರೊ, ಜಾರ್ಖಂಡ್​:ಜಿಲ್ಲೆಯಲ್ಲಿ ಭಾರೀ ಅವಘಡವೊಂದು ತಪ್ಪಿದೆ. ಭುವನೇಶ್ವರದಿಂದ ದೆಹಲಿಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಆದರೆ, ಚಾಲಕನ ಸಮಯಪ್ರಜ್ಞೆಯಿಂದ ನೂರಾರು ಜನರ ಪ್ರಾಣ ಉಳಿದಿದೆ. ಸಂತಾಲ್ದಿಹ್ ರೈಲ್ವೇ ಕ್ರಾಸಿಂಗ್​​ನಲ್ಲಿ ಈ ಅಪಘಾತ ಸಂಭವಿಸಿದೆ.

ರೈಲ್ವೆ ಕ್ರಾಸಿಂಗ್​ನಲ್ಲಿ ಅಪಘಾತ: ಭುವನೇಶ್ವರದಿಂದ ನವದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್​​​​ಪ್ರೆಸ್ ಟ್ರ್ಯಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದಿದೆ. ಗೊಮೊಹ್ ಮತ್ತು ಅದ್ರಾ ನಡುವಿನ ಭೋಜುಡಿಹ್ ರೈಲ್ವೆ ವಿಭಾಗದ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಅಪಘಾತ ಸಂಭವಿಸಿದೆ. ಮಂಗಳವಾರ ಸಂಜೆ 4.40ಕ್ಕೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ತಿಳಿದು ಬಂದಿದೆ.

ಅಧಿಕಾರಿಗಳಲ್ಲಿ ಸಂಚಲನ:ಟ್ರ್ಯಾಕ್ಟರ್‌ಗೆ ರಾಜಧಾನಿ ಎಕ್ಸ್‌ಪ್ರೆಸ್‌ ಡಿಕ್ಕಿ ಹೊಡೆದ ಸುದ್ದಿ ತಿಳಿದ ತಕ್ಷಣ ರೈಲ್ವೆ ಸಿಬ್ಬಂದಿ ಭೋಜುಡಿಹ್ ರೈಲು ನಿಲ್ದಾಣದಲ್ಲಿ ಹಾಜರಿದ್ದ ರೈಲ್ವೆ ಸಿಬ್ಬಂದಿ ಮತ್ತು ಅಧಿಕಾರಿಗಳ ನಡುವೆ ಕೋಲಾಹಲ ಉಂಟಾಯಿತು. ಎಲ್ಲರೂ ತರಾತುರಿಯಲ್ಲಿ ಸ್ಥಳಕ್ಕೆ ದೌಡಾಯಿಸಿದರು. ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಆರ್‌ಪಿಎಫ್ ಹಾಗೂ ರೈಲ್ವೇ ಸಿಬ್ಬಂದಿ ನೆರವಿನಿಂದ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಹೊರ ತೆಗೆಯಲಾಯಿತು. ಈ ಹಿನ್ನೆಲೆ ರೈಲು ಸುಮಾರು 45 ನಿಮಿಷ ತಡವಾಯಿತು. ಸಂಜೆ 5.27ಕ್ಕೆ ಟ್ರ್ಯಾಕ್ಟರ್ ತೆಗೆದು ರೈಲನ್ನು ಆದ್ರ ಮೂಲಕ ದೆಹಲಿಗೆ ರವಾನಿಸಲಾಯಿತು.

ಗೇಟ್ ಮ್ಯಾನ್ ಅಮಾನತು: ಘಟನೆಯ ಗಂಭೀರತೆ ಹಿನ್ನೆಲೆ ರೈಲ್ವೆ ಗೇಟ್​ನಲ್ಲಿ ನಿಯೋಜಿಸಲಾಗಿದ್ದ ಗೇಟ್​ಮನ್​ನನ್ನು ರೈಲ್ವೆ ಇಲಾಖೆ ಅಮಾನತುಗೊಳಿಸಿದೆ. ರಾಜಧಾನಿ ಎಕ್ಸ್‌ಪ್ರೆಸ್‌ ಹಾದು ಹೋಗುವ ಮಾಹಿತಿ ಪಡೆದು ರೈಲ್ವೆ ಗೇಟ್‌ ಮುಚ್ಚಲು ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ. ಅದೇ ಸಮಯಕ್ಕೆ ಟ್ರ್ಯಾಕ್ಟರ್ ಗೇಟ್ ದಾಟುತ್ತಿತ್ತು ಎಂದು ತಿಳಿದು ಬಂದಿದೆ.

ರೈಲು ಬರುವ ಸಮಯ ಮತ್ತು ಟ್ರ್ಯಾಕ್ಟರ್​ ದಾಟುವ ಸಮಯ ಒಂದೇ ಆಗಿತ್ತು. ಆದರೆ ಕೊಂಚದರಲ್ಲೇ ಟ್ರ್ಯಾಕ್ಟರ್​ ಟ್ರಾಲಿ ರೈಲಿನಿಂದ ಪಾಸ್​ ಆಗಿದ್ದು, ಆದ್ರೂ ಟ್ರಾಲಿ ಟ್ರೈನ್​ಗೆ ತಾಗಿದೆ. ಅಷ್ಟರಲ್ಲೇ ರೈಲಿನ ಚಾಲಕ ಬ್ರೇಕ್ ಹಾಕುವ ಮೂಲಕ ಉಗಿಬಂಡಿಯನ್ನು ನಿಲ್ಲಿಸಿದ್ದಾನೆ. ರೈಲ್ವೇ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ಮಾಹಿತಿ ನೀಡಿದ ಹಿರಿಯ ಅಧಿಕಾರಿ: ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಆದ್ರಾ ಮಂಡಲದ ಹಿರಿಯ ಅಧಿಕಾರಿ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಆದರೂ ಘಟನೆಯಲ್ಲಿ ರೈಲ್ವೆಗೆ ಯಾವುದೇ ಹಾನಿಯಾಗಿಲ್ಲ. ರೈಲು ಸಂಪೂರ್ಣ ಸುರಕ್ಷಿತವಾಗಿ ನಿಂತಿತ್ತು. ಸದ್ಯ ಗೇಟ್ ಮ್ಯಾನ್ ನಿರ್ಲಕ್ಷ್ಯ ಬಯಲಿಗೆ ಬಂದಿದ್ದು, ಅಮಾನತು ಮಾಡಲಾಗಿದೆ. ಈ ಘಟನೆಯಲ್ಲಿ ರೈಲು ಸುಮಾರು 45 ನಿಮಿಷಗಳ ಕಾಲ ತಡವಾಗಿ ಸಂಚರಿಸಿತ್ತು ಎಂದು ಮಾಹಿತಿ ನೀಡಿದರು.

ಓದಿ:ಮತ್ತೊಂದು ರೈಲು ದುರಂತ: ಭಾರತ್ ಪೆಟ್ರೋಲಿಯಂ ಡಿಪೋ ಬಳಿ ಹಳಿತಪ್ಪಿದ ಗೂಡ್ಸ್ ರೈಲಿನ 2 ಬೋಗಿಗಳು

ಒಡಿಶಾ ರೈಲು ಅಪಘಾತ: ಎರಡು ಪ್ರಯಾಣಿಕ ರೈಲುಗಳು ಮತ್ತು ಸರಕು ಸಾಗಣೆ ರೈಲು ಒಳಗೊಂಡ ವಿನಾಶಕಾರಿ ಅಪಘಾತದಲ್ಲಿ ಕನಿಷ್ಠ 280ಕ್ಕೂ ಹೆಚ್ಚು ಜನರ ಪ್ರಾಣವನ್ನು ಕಳೆದುಕೊಂಡಿದ್ದು, 1100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರಂತ ವಿಶ್ವವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು.

ABOUT THE AUTHOR

...view details