ಶ್ರೀಕಾಕುಳಂ (ಆಂಧ್ರ ಪ್ರೇದೇಶ):ಓರ್ವ ಯುವಕ ತನ್ನ ಸ್ನೇಹಿತರ ಸಹಾಯದಿಂದ ಪ್ರಯಾಣ ದರ ಪಾವತಿಸುವುದಾಗಿ ಹೇಳಿ ಬಸ್ ಹತ್ತಿದ. ಆದರೆ, ಬಸ್ ಚಾಲಕ ಟಿಕೆಟ್ ಹಣ ಕೇಳಿದಾಗ, ಸ್ನೇಹಿತರಿಗೆ ಕರೆ ಮಾಡಿ ಫೋನ್ ಪೇ ಮೂಲಕ ಹಣ ಹಾಕಿಸಿಕೊಳ್ಳುತ್ತೇನೆ ಎಂದು ಯುವಕ ಹೇಳಿದ್ದ. ಬಹಳ ಸಮಯವಾದರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಬಸ್ ಹತ್ತಿದ ವ್ಯಕ್ತಿಯು, ತನ್ನ ಗೆಳೆಯನಿಗೆ ಕಾಲ್ ಮಾಡಿದ ಆದ್ರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹಣ ನೀಡದೇ ಬಸ್ ಹತ್ತಿದ ಯುವಕನಿಗೆ ಪ್ರಯಾಣದ ದರ ಪಾವತಿಸುವಂತೆ ಖಾಸಗಿ ಬಸ್ ಚಾಲಕ ಹಾಗೂ ಕ್ಲೀನರ್ ಮತ್ತೊಮ್ಮೆ ಕೇಳಿದ್ದಾರೆ. ಬಸ್ ಇಳಿದ ಬಳಿಕ ಹಣ ಕೊಡುವುದಾಗಿ ಯುವಕ ತಿಳಿಸಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಆಕ್ರೋಶಗೊಂಡ ಚಾಲಕ- ಕ್ಲೀನರ್, ಯುವಕನನ್ನು ಬಸ್ನಿಂದ ಹೊರಗೆ ತಳ್ಳಿದ್ದಾರೆ. ಆ ಘಟನೆಯಲ್ಲಿ ಯುವಕ ಮೃತಪಟ್ಟಿದ್ದಾನೆ. ಈ ಅಮಾನವೀಯ ಘಟನೆ ಮೇ 3 ರಂದು ಶ್ರೀಕಾಕುಳಂ ಜಿಲ್ಲೆಯ ಲಾವೇರು ಮಂಡಲದ ಬುಡುಮೂರು ರಾಷ್ಟ್ರೀಯ ಹೆದ್ದಾರಿಯ ಬಳಿ ನಡೆದಿದ್ದು, ತಡವಾಗಿ ಬಂದಿದೆ.
ಪೊಲೀಸರು ಹೇಳಿದ್ದೇನು?:ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ವಿಶಾಖಪಟ್ಟಣಂನ ಮಧುರವಾಡ ಪ್ರದೇಶದ ಗೆದ್ದಲ ಭರತ್ ಕುಮಾರ್ (27) ಎಂದು ಪೊಲೀಸರು ಗುರುತಿಸಿದ್ದಾರೆ. ಇತ್ತೀಚೆಗಷ್ಟೇ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ. ಪೊಲೀಸರ ಪ್ರಕಾರ, ಭರತ್ ಕುಮಾರ್ ವಿಶಾಖಪಟ್ಟಣದಿಂದ ತನ್ನ ಸ್ನೇಹಿತರೊಂದಿಗೆ ಮೇ 3 ರಂದು ಮಧ್ಯರಾತ್ರಿ ಶ್ರೀಕಾಕುಳಂಗೆ ಬಂದಿದ್ದ. ತಾನು ಕೆಲಸ ಮಾಡಿ ಮನೆಗೆ ಹೋಗುವುದಾಗಿ ಗೆಳೆಯರಿಗೆ ತಿಳಿಸಿ, ಮುಂಜಾನೆ ಯುವಕ ಭಾರತ್ ಕುಮಾರ್, ಜಂಕ್ಷನ್‌ನಲ್ಲಿ ಭುವನೇಶ್ವರದಿಂದ ವಿಶಾಖಪಟ್ಟಣಕ್ಕೆ ಖಾಸಗಿ ಬಸ್ ಹತ್ತಿದ್ದಾನೆ. ಭರತ್ ಕುಮಾರ್ಗೆ ಪ್ರಯಾಣ ದರಕ್ಕೆ 200 ರೂ. ಸ್ನೇಹಿತರು ಫೋನ್ ಪೇ ಮಾಡುತ್ತಾರೆ ಎಂದು ಬಸ್ ಕ್ಲೀನರ್ ಬೊಮ್ಮಳಿ ಅಪ್ಪಣ್ಣ ಹಾಗೂ ಚಾಲಕ ರಾಮಕೃಷ್ಣಗೆ ಹೇಳಿದ್ದ. ಎಷ್ಟು ಹೊತ್ತಾದರೂ ಹಣ ಬರಲಿಲ್ಲ ಎಂದು ಮತ್ತೆ ಬಸ್ ಚಾಲಕ ಹಾಗೂ ಕ್ಲೀನರ್ ಕೇಳಿದ್ದರು. ಸ್ನೇಹಿತನ ಫೋನ್ ಸ್ವಿಚ್ ಆಫ್ ಆಗಿದ್ದು, ವಿಶಾಖಪಟ್ಟಣಂಗೆ ಹೋದ ನಂತರ ಕೊಡುವುದಾಗಿ ಹೇಳಿದ್ದ. ಆಗ ಯುವಕ ಹಾಗೂ ಬಸ್ ಚಾಲಕ, ಕ್ಲೀನರ್ ಅವರ ನಡುವೆ ಜಗಳ ನಡೆದಿದೆ.