ಕರ್ನಾಟಕ

karnataka

ETV Bharat / bharat

31 ಲಕ್ಷ ಹಣವಿದ್ದ ಎಟಿಎಂ ವಾಹನದ ಜೊತೆ ಚಾಲಕ ಪರಾರಿ! - ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಹಣ ತುಂಬುವ ಯಂತ್ರ

ನಗದು ನಿರ್ವಹಣೆ ಕಂಪನಿಯೊಂದರ ಚಾಲಕ ಎಟಿಎಂ ವಾಹನ ಮತ್ತು 31 ಲಕ್ಷ ರೂಪಾಯಿ ಹಣದ ಜತೆ ಪರಾರಿಯಾಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

Driver flees with ATM cash vehicle  Driver flees with ATM cash vehicle in Hyderabad  ATM cash vehicle found  ATM cash vehicle theft case  ಎಟಿಎಂ ವಾಹನ ಜೊತೆ ಚಾಲಕ ಪರಾರಿ  ನಗದು ನಿರ್ವಹಣೆ ಕಂಪನಿಯೊಂದರ ಚಾಲಕ  ಹಣದೊಂದಿಗೆ ಪರಾರಿಯಾಗಿರುವ ಘಟನೆ  ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಹಣ ತುಂಬುವ ಯಂತ್ರ  ಎಟಿಎಂ ಯಂತ್ರಕ್ಕೆ ಹಣ ತುಂಬಲು ನಾಲ್ವರು ನೌಕರರು
31 ಲಕ್ಷ-ಎಟಿಎಂ ವಾಹನ ಜೊತೆ ಚಾಲಕ ಪರಾರಿ

By

Published : Nov 4, 2022, 11:41 AM IST

ಹೈದರಾಬಾದ್(ತೆಲಂಗಾಣ):ನಗದು ನಿರ್ವಹಣೆ ಕಂಪನಿಯೊಂದರ ಚಾಲಕ ವಾಹನ ಸಮೇತ 31 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿರುವ ಘಟನೆ ರಾಜೇಂದ್ರನಗರದಲ್ಲಿ ನಡೆದಿದೆ. ಗುರುವಾರ ಸಂಜೆ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಹಣ ತುಂಬುವ ಯಂತ್ರಕ್ಕೆ ಕಂಪನಿಯ ಉದ್ಯೋಗಿ ಬಂದಿದ್ದಾಗ ಪ್ರಕರಣ ನಡೆದಿದೆ.

ರಾಜೇಂದ್ರನಗರದ ಕೆನರಾ ಬ್ಯಾಂಕ್​ವೊಂದರ ಎಟಿಎಂ ಯಂತ್ರಕ್ಕೆ ಹಣ ತುಂಬಲು ನಾಲ್ವರು ನೌಕರರು ಬಂದಿದ್ದಾರೆ. ಈ ಸಂದರ್ಭದಲ್ಲಿ ವಾಹನದಿಂದ ಕೆಳಗಿಳಿದು ಎಟಿಎಂಗೆ ಹಣ ತುಂಬಲು ಮಾಡಲು ಸಿಬ್ಬಂದಿ ಹೋಗಿದ್ದರು. ನಂತರ ಚಾಲಕ ವಾಹನಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗನ್‌ಮ್ಯಾನ್ ಚಂದ್ರಯ್ಯ ಸ್ವಲ್ಪ ಸಮಯದ ನಂತರ ಎಟಿಎಂನಿಂದ ಹಣ ಸಂಗ್ರಹಿಸಲು ಹೊರಬಂದಿದ್ದು, ವಾಹನ ನಾಪತ್ತೆಯಾಗಿರುವುದು ಕಂಡು ಬಂದಿದೆ. ಎಟಿಎಂ ಬೂತ್‌ನಲ್ಲಿದ್ದ ಇತರ ಉದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಕಂಪನಿಗೆ ಮಾಹಿತಿ ನೀಡಿದ್ದರು. ರಾಜೇಂದ್ರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಹುಡುಕಾಟ ಆರಂಭಿಸಿದಾಗ ಕಿಸ್ಮತ್‌ಪುರ ಸೇತುವೆ ಬಳಿ ವಾಹನ ಪತ್ತೆಯಾಗಿದೆ. ಆದ್ರೆ ಚಾಲಕ ಫಾರೂಕ್ (25) ಮಾತ್ರ ವಾಹನದಲ್ಲಿರಲಿಲ್ಲ. ವಾಹನದಲ್ಲಿದ್ದ 28 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಗರದ ಬೋರಬಂಡಾ ನಿವಾಸಿಯಾಗಿರುವ ಆರೋಪಿ 3 ಲಕ್ಷದೊಂದಿಗೆ ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಈ ವರ್ಷ ಹೈದರಾಬಾದ್‌ನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

ಇದನ್ನೂ ಓದಿ:ಗ್ಯಾಸ್ ಕಟರ್ ಬಳಸಿ ಎಟಿಎಂಯಲ್ಲಿದ್ದ 14 ಲಕ್ಷ ಲೂಟಿ

ABOUT THE AUTHOR

...view details