ಕರ್ನಾಟಕ

karnataka

ETV Bharat / bharat

ಅಪಘಾತದಿಂದಾಗಿ ಟ್ರ್ಯಾಕ್ಟರ್​ನಲ್ಲಿ ಶಾರ್ಟ್ ಸರ್ಕ್ಯೂಟ್: ಚಾಲಕ ಸಜೀವ ದಹನ! - ಟ್ರ್ಯಾಕ್ಟರ್​ ಅಪಘಾತ

ಟ್ರ್ಯಾಕ್ಟರ್‌ಗೆ ಜೋಡಿಸಲಾದ ಟ್ಯಾಂಕರ್ ಕೂಡ ಪಲ್ಟಿಯಾಗಿದ್ದು, ಅಪಘಾತದ ತೀವ್ರತೆಗೆ ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ವಿಭಜನೆಯಾಗಿದೆ. ಚಾಲಕ ರಾಜುರಾಮ್ ರಸ್ತೆಗೆ ಬಿದಿದ್ದು, ಟ್ರ್ಯಾಕ್ಟರ್ ಚಾಲಕನ ಮೇಲೆ ಬಿದ್ದಿದೆ. ಅಪಘಾತದ ಸ್ವಲ್ಪ ಸಮಯದ ನಂತರ, ಟ್ರ್ಯಾಕ್ಟರ್‌ನ ಟ್ಯಾಂಕ್ ಸೋರಿಕೆಯಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹಿಡಿದಿದೆ.

driver-burnt-alive
driver-burnt-alive

By

Published : Jan 8, 2021, 7:27 AM IST

ಜೋಧ್​ಪುರ (ರಾಜಸ್ಥಾನ): ಅಪಘಾತದಿಂದ ಟ್ರ್ಯಾಕ್ಟರ್ ಉರುಳಿ ಚಾಲಕ ಜೀವಂತ ಸುಟ್ಟು ಹೋದ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ.

ನಗರದ ಗ್ರಾಮ ಭಂಡು ಫೀಚ್ ರಸ್ತೆಯಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಟ್ರ್ಯಾಕ್ಟರ್‌ಗೆ ಜೋಡಿಸಲಾದ ಟ್ಯಾಂಕರ್ ಕೂಡ ಪಲ್ಟಿಯಾಗಿದ್ದು, ಅಪಘಾತದ ತೀವ್ರತೆಗೆ ಟ್ರ್ಯಾಕ್ಟರ್ ಮತ್ತು ಟ್ಯಾಂಕರ್ ವಿಭಜನೆಯಾಗಿದೆ. ಚಾಲಕ ರಾಜುರಾಮ್ ರಸ್ತೆಗೆ ಬಿದಿದ್ದು, ಟ್ರ್ಯಾಕ್ಟರ್ ಚಾಲಕನ ಮೇಲೆ ಬಿದ್ದಿದೆ. ದುರ್ಘಟನೆ ರಾತ್ರಿ ವೇಳೆ ಸಂಭವಿಸಿದ ಕಾರಣ ತಕ್ಷಣಕ್ಕೆ ಯಾರಿಗೂ ವಿಷಯ ತಿಳಿಯಲಿಲ್ಲ.

ಅಪಘಾತದ ಸ್ವಲ್ಪ ಸಮಯದ ನಂತರ, ಟ್ರ್ಯಾಕ್ಟರ್‌ನ ಟ್ಯಾಂಕ್ ಸೋರಿಕೆಯಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹಿಡಿದಿದೆ. ಬೆಂಕಿ ಉರಿಯುತ್ತಿರುವುದನ್ನು ನೋಡಿ ಸುತ್ತಮುತ್ತಲಿನ ಜನರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಚಾಲಕ ಜೀವಂತ ಸುಟ್ಟಿರುವುದು ತಿಳಿದು ಬಂದಿದೆ.

ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮೃತ ವ್ಯಕ್ತಿಯನ್ನು ಝಾನ್ವಾರ್ ಪ್ರದೇಶದ ಜೊಲಿಯಾಲಿ ಗ್ರಾಮದ ನಿವಾಸಿ ರಾಜುರಾಮ್ ವಿಷ್ಣೋಯ್ (55) ಎಂದು ಗುರುತಿಸಲಾಗಿದೆ. ಟ್ರ್ಯಾಕ್ಟರ್​ಗೆ ಹೊಡೆದ ಅಪರಿಚಿತ ವಾಹನಕ್ಕಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ABOUT THE AUTHOR

...view details