ಕರ್ನಾಟಕ

karnataka

ETV Bharat / bharat

ಗುಜರಾತ್​ನಲ್ಲಿ ಡಿಆರ್​ಐ ಭರ್ಜರಿ ಬೇಟೆ.. ಅಕ್ರಮವಾಗಿ ಸಾಗಿಸುತ್ತಿದ್ದ ₹ 26 ಕೋಟಿ ಮೌಲ್ಯದ ಪುರಾತನ ವಸ್ತುಗಳು ವಶಕ್ಕೆ - ಪುರಾತನ ವಸ್ತುಗಳು ವಶಕ್ಕೆ

ಸಮುದ್ರದ ಮೂಲಕ ಅಕ್ರಮವಾಗಿ ಸಾಗಿಸಲಾಗಿದ್ದ 26 ಕೋಟಿ ರೂಪಾಯಿ ಮೌಲ್ಯದ ಪುರಾತನ ವಸ್ತುಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಜಪ್ತಿ ಮಾಡಿದೆ.

DRI seizes Art and Antiques
ಜಪ್ತಿಮಾಡಲಾದ ಹಳೆಯ ಶಿಲ್ಪಾಕೃತಿ

By ETV Bharat Karnataka Team

Published : Sep 12, 2023, 1:10 PM IST

ಅಹಮದಾಬಾದ್ (ಗುಜರಾತ್): ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಅಹಮದಾಬಾದ್ ವಲಯ ಘಟಕ ಕಚ್ ಜಿಲ್ಲೆಯ ಮುಂದ್ರಾ ಬಂದರಿನಲ್ಲಿ ಸಮುದ್ರದ ಮೂಲಕ ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳನ್ನು ಕಳ್ಳಸಾಗಣೆ ಮಾಡುವ ದಂಧೆಯನ್ನು ಸೋಮವಾರ ಭೇದಿಸಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯವು ವಶಪಡಿಸಿಕೊಂಡ ಅನೇಕ ವಸ್ತುಗಳು ಅಮೂಲ್ಯವಾದ ಕಲ್ಲುಗಳು, ಚಿನ್ನ ಹಾಗೂ ಬೆಳ್ಳಿಯಿಂದ ತಯಾರಿಸಲ್ಪಟ್ಟಿವೆ. ಜಪ್ತಿ ಮಾಡಲಾದ ವಸ್ತುಗಳಲ್ಲಿ ಹೆಚ್ಚಿನವು ಯುರೋಪಿಯನ್ ರಾಷ್ಟ್ರಗಳು, ವಿಶೇಷವಾಗಿ ಬ್ರಿಟನ್ ಮತ್ತು ನೆದರ್ಲ್ಯಾಂಡ್​ನಿಂದ ತರಿಸಲಾಗಿದೆ ಎಂದು ತಿಳಿದು ಬಂದಿದೆ. ನಿರ್ದಿಷ್ಟ ಬುದ್ಧಿಮತ್ತೆಯ ಆಧಾರದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ಯುಎಇಯ ಜೆಬೆಲ್ ಅಲಿಯಿಂದ ಆಮದು ಮಾಡಿಕೊಳ್ಳುತ್ತಿರುವ ಆಮದು ಕಂಟೇನರ್ ಅನ್ನು ಪತ್ತೆ ಮಾಡಿ ಗುರುತಿಸಿದೆ ಎಂದು ಡಿಆರ್‌ಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಜಪ್ತಿ ಮಾಡಲಾದ ವರ್ಣಚಿತ್ರ

ಇದನ್ನೂ ಓದಿ:ಸೊಂಟ ಪಟ್ಟಿಯಲ್ಲಿ ₹1.58 ಕೋಟಿ ಮೌಲ್ಯದ ಚಿನ್ನ! ಬೆಂಗಳೂರು ಏರ್ಪೋರ್ಟ್​​ನಲ್ಲಿ ಸಿಕ್ಕಿಬಿದ್ದ ಇಬ್ಬರು ಪ್ರಯಾಣಿಕರು

ಡಿಆರ್‌ಐ ವಶಪಡಿಸಿಕೊಂಡ ಕಂಟೇನರ್ ಅನ್ನು ತೆರೆದಾಗ ಹಳೆಯ ಶಿಲ್ಪಾಕೃತಿಗಳು, ಪಾತ್ರೆಗಳು, ವರ್ಣಚಿತ್ರಗಳು, ಪೀಠೋಪಕರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ವಸ್ತುಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಅಂದಾಜು ಮೌಲ್ಯ 26.8 ಕೋಟಿ ರೂ.ಎಂದು ಅಂದಾಜಿಸಲಾಗಿದೆ. ಈ ವಸ್ತುಗಳ ಪೈಕಿ ಹಲವು ಅಮೂಲ್ಯವಾದ ಕಲ್ಲುಗಳು, ಚಿನ್ನ ಅಥವಾ ಬೆಳ್ಳಿಯಿಂದ ಲೇಪಿತವಾಗಿವೆ.

ಜಪ್ತಿಮಾಡಲಾದ ಪುರಾತನ ಪೀಠೋಪಕರಣಗಳು

ಇದನ್ನೂ ಓದಿ:ಮಂಗಳೂರು: ₹90 ಲಕ್ಷ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟ ಯತ್ನ, ಮೂವರ ಬಂಧನ

ಪರಿಶೀಲನೆ ಸಮಯದಲ್ಲಿ ಡಿಆರ್‌ಐ ಹಳೆಯ ಪ್ರತಿಮೆಗಳು, ವಿಂಟೇಜ್ ಪಾತ್ರೆಗಳು, ವರ್ಣಚಿತ್ರಗಳು, ಪುರಾತನ ಪೀಠೋಪಕರಣಗಳು ಮತ್ತು ಇತರ ಬೆಲೆಬಾಳುವ ಪಾರಂಪರಿಕ ವಸ್ತುಗಳನ್ನು ಕಂಟೇನರ್‌ನಿಂದ ಪತ್ತೆ ಮಾಡಿದೆ. ಪತ್ತೆಯಾದ ಜಾರ್ಜಸ್ ಡಿ ಗೀಟೆರೆ ಅವರ "ದಿ ಹ್ಯಾರೆಮ್ ಗಾರ್ಡ್" ನಂತಹ ಕೆಲವು ವಸ್ತುಗಳು 19ನೇ ಶತಮಾನಕ್ಕೆ ಹಿಂದಿನವು. ಇವುಗಳಲ್ಲಿ ಹಲವಾರು ವಸ್ತುಗಳು ಅಮೂಲ್ಯವಾದ ಕಲ್ಲುಗಳು, ಚಿನ್ನ ಹಾಗೂ ಬೆಳ್ಳಿಯಿಂದ ತಯಾರಿಸಲ್ಪಟ್ಟಿವೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ ಹೇಳಿದೆ.

ಜಪ್ತಿಮಾಡಲಾದ ಹಳೆಯ ಶಿಲ್ಪಾಕೃತಿ

ವಶಪಡಿಸಿಕೊಂಡ ವಸ್ತುಗಳಲ್ಲಿ ಹೆಚ್ಚಿನವು ಯುರೋಪಿಯನ್ ದೇಶಗಳಿಂದ, ವಿಶೇಷವಾಗಿ ಯುಕೆ ಮತ್ತು ನೆದರ್ಲ್ಯಾಂಡ್​​‌ನಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಡಿಆರ್‌ಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಸ್ಟಮ್ಸ್ ಸುಂಕವನ್ನು ತಪ್ಪಿಸಲು ರವಾನೆಯನ್ನು ಹೆಚ್ಚು ಕಡಿಮೆ ಮೌಲ್ಯೀಕರಿಸಲಾಗಿದೆ. ಡಿಆರ್‌ಐ ಪ್ರಕಾರ, ಅಂತಹ ವಸ್ತುಗಳಿಗೆ ಅಕ್ರಮ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ.

ಜಪ್ತಿಮಾಡಲಾದ ವಿಂಟೇಜ್ ಪಾತ್ರೆಗಳು

ಈ ಪ್ರಾಚೀನ ವಸ್ತುಗಳು ಮತ್ತು ಕಲಾಕೃತಿಗಳ ಮೂಲ ಯಾವುದು?, ರವಾನೆ ಮಾಡುತ್ತಿರುವವರು ಹಾಗೂ ಸ್ವೀಕರಿಸುತ್ತಿರುವವರು ಯಾರು? ಎಂಬುದನ್ನು ಪತ್ತೆ ಮಾಡಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳಿಗಾಗಿ ತಜ್ಞರನ್ನು ಸಂಪರ್ಕಿಸಲಾಗುವುದು ಎಂದು ಡೈರೆಕ್ಟೋರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್​ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕೇರಳ ವಿಮಾನ ನಿಲ್ದಾಣದಲ್ಲಿ ಕೊಕೇನ್, ಹೆರಾಯಿನ್ ಸೇರಿ 44 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ

ABOUT THE AUTHOR

...view details