ಕಛ್ (ಗುಜರಾತ್): ಗುಜರಾತ್ನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಂದಾಜು 48 ಕೋಟಿ ರೂಪಾಯಿ ಮೌಲ್ಯದ ಇ ಸಿಗರೇಟ್ (e cigarette) ಗಳನ್ನು ಜಪ್ತಿ ಮಾಡಲಾಗಿದೆ.
ಕಛ್ನಲ್ಲಿರುವ ಮುಂದ್ರಾ ಬಂದರಿಗೆ ಚೀನಾದಿಂದ ಕಂಟೇನರ್‌ವೊಂದು ಆಗಮಿಸಿತ್ತು. ಈ ವೇಳೆ ಡಿಆರ್‌ಐ ಅಧಿಕಾರಿಗಳಿಗೆ ಅನುಮಾನಾಸ್ಪದ ವಸ್ತುಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಂತೆಯೇ, ಸೂರತ್ ಮತ್ತು ಅಹಮದಾಬಾದ್ ಡಿಆರ್‌ಐ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಅಧಿಕಾರಿಗಳ ಶೋಧ ಕಾರ್ಯದ ವೇಳೆ ಕಂಟೈನರ್ನಲ್ಲಿ 2,00,400 ಇ ಸಿಗರೇಟ್ಗಳು ಪತ್ತೆಯಾಗಿವೆ. ಇವುಗಳ ಮೌಲ್ಯ 48 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಭಾರತವು ಈಗಾಗಲೇ ಇ-ಸಿಗರೇಟ್ ಆಮದನ್ನು ನಿಷೇಧಿಸಿದೆ.
ಕೆಲವು ದಿನಗಳ ಹಿಂದೆ ಸೂರತ್ ಸಮೀಪ ಮುಂದ್ರಾ ಬಂದರಿನಿಂದ ಬರುತ್ತಿದ್ದ ಕಂಟೈನರ್‌ನಲ್ಲೂ ಅಪಾರ ಪ್ರಮಾಣದ ಇ-ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಕೇಂದ್ರೀಯ ತನಿಖಾ ಸಂಸ್ಥೆಗಳು ಕಛ್‌ನ ಮುಂದ್ರಾ ಬಂದರು ಮತ್ತು ಕಾಂಡ್ಲಾ ಬಂದರಿನಲ್ಲೂ ತನಿಖೆ ನಡೆಸುತ್ತಿವೆ.
ಇದನ್ನೂ ಓದಿ:ವಿವಾಹೇತರ ಸಂಬಂಧ: 60 ವರ್ಷದ ವ್ಯಕ್ತಿಯ ಮರ್ಮಾಂಗ ಕತ್ತರಿಸಿದ ಪ್ರಿಯತಮೆ