ನವದೆಹಲಿ :ಬೃಹತ್ ಕಾರ್ಯಾಚರಣೆವೊಂದರಲ್ಲಿ 42 ಕೋಟಿ ರೂಪಾಯಿ ಮೌಲ್ಯದ 85 ಕೆಜಿ ಚಿನ್ನ ವಶ(DRI seized 85 kgs Gold)ಕ್ಕೆ ಪಡೆದುಕೊಳ್ಳುವಲ್ಲಿ ಆದಾಯ ಇಲಾಖೆ ಗುಪ್ತಚರ ನಿರ್ದೇಶನಾಲಯ(Directorate of Revenue Intelligence) ಯಶಸ್ವಿಯಾಗಿದೆ.
ದೆಹಲಿಯ ಚತ್ತರ್ಪುರ ಮತ್ತು ಗುರುಗ್ರಾಮದ ಅನೇಕ ಕಡೆ ಶೋಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಇಷ್ಟೊಂದು ಮೌಲ್ಯದ ಚಿನ್ನ(Gold) ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನ ವಿಲೇವಾರಿ ಮಾಡಲು ಬಾರ್, ಸಿಲಿಂಡರ್ ಸೇರಿದಂತೆ ವಿವಿಧ ಯಂತ್ರದ ಭಾಗಗಳ ರೂಪದಲ್ಲಿ ತಯಾರು ಮಾಡಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾದ ಇಬ್ಬರು,ಚೀನಾ ಹಾಗೂ ತೈವಾನದ ಇಬ್ಬರು ಸೇರಿ ನಾಲ್ವರ ಬಂಧನ ಮಾಡಲಾಗಿದೆ.
ಇದನ್ನೂ ಓದಿರಿ:'ನಾನು ಅರ್ಧ ಭಾರತೀಯ, ಅದು ನನ್ನ ಹೃದಯದಲ್ಲಿದೆ' ಭಾರತದ ಬಗ್ಗೆ ಎಬಿಡಿ ವಿಶೇಷ ಮಾತು ಕೇಳಿ!
ಕಳೆದ ಕೆಲ ದಿನಗಳ ಹಿಂದೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1 ಕೋಟಿ ರೂಪಾಯಿ ಮೌಲ್ಯದ 2.5 ಕೆಜಿ ಚಿನ್ನವನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.