ಕರ್ನಾಟಕ

karnataka

ETV Bharat / bharat

IAS ಪಾಸ್ ಮಾಡಿದ್ದ ಅಭ್ಯರ್ಥಿ ಕೋವಿಡ್​ಗೆ ಬಲಿ - ಮಹಾರಾಷ್ಟ್ರ ಕೋವಿಡ್

ಐಎಎಸ್ ಪರೀಕ್ಷೆ ಪಾಸ್ ಮಾಡಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂಬ ಕನಸು ಕಾಣುತ್ತಿದ್ದ ಪ್ರತಿಭಾವಂತ ಯುವಕನೋರ್ವ ಇದೀಗ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

Pranjal Nakat
Pranjal Nakat

By

Published : May 15, 2021, 9:49 PM IST

Updated : May 17, 2021, 11:20 AM IST

ಹೈದರಾಬಾದ್​:ಇತ್ತೀಚೆಗೆ ಯುಪಿಎಸ್​​ಸಿ ಪರೀಕ್ಷೆ ಪಾಸ್​ ಮಾಡಿದ್ದ ಪ್ರಂಜಲ್​ ಪ್ರಭಾಕರ್ ನಕಾತ್​​ ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಯಾಗಬೇಕೆಂಬ ಅವರ ಕನಸು ಸಹ ಸಾವನ್ನಪ್ಪಿದೆ.

ಮೂಲತಃ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ತಾಲೂಕಿನ ತಾಂಡಲಿ ಎಂಬ ಸಣ್ಣ ಸ್ಥಳದಲ್ಲಿ ಜನಸಿದ್ದ ಇವರಿಗೆ ಕಳೆದ ವಾರದ ಹಿಂದೆ ಕೋವಿಡ್ ಸೋಂಕು ದೃಢಗೊಂಡಿತ್ತು. ಸೋಂಕು ಶ್ವಾಸಕೋಶಕ್ಕೆ ತಗುಲಿ, ಆರೋಗ್ಯ ಸ್ಥಿತಿ ಹದಗೆಡಲು ಶುರುವಾಗಿದ್ದರಿಂದ ಏರ್​ ಆ್ಯಂಬುಲೆನ್ಸ್​ ಮೂಲಕ ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ಪೋಷಕರು ಹಾಗೂ ಸಂಬಂಧಿಕರು ಪ್ರಂಜಲ್​ ಚಿಕಿತ್ಸೆಗೋಸ್ಕರ 55 ಲಕ್ಷ ರೂ ಖರ್ಚು ಮಾಡಿದ್ದಾರೆ. ಇಷ್ಟಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಡೆಡ್ಲಿ ವೈರಸ್​ಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಯಾರಿಗೂ ಗೊತ್ತಿಲ್ಲದಂತೆ ಮೊಟ್ಟೆ ಕದ್ದ ಪೊಲೀಸ್​.. ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ!

ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದ್ದ ಪ್ರಂಜಲ್​ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಬೇಕು ಎಂಬು ಆಸೆ ಇಟ್ಟುಕೊಂಡಿದ್ದರು. ಆದರೆ, ವಿಧಿಯಾಟದ ಮುಂದೆ ಸೋತು, ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಸ್ನೇಹಿತರು, ಸಂಬಂಧಿಕರು ಶೋಕ ವ್ಯಕ್ತಪಡಿಸಿದ್ದಾರೆ.

Last Updated : May 17, 2021, 11:20 AM IST

ABOUT THE AUTHOR

...view details