ನವದೆಹಲಿ :ಹಿಂದೂ ಮಹಾಸಾಗರದಲ್ಲಿನ (ಐಒಆರ್) ಮಿಲಿಟರಿ ಯುದ್ಧನೌಕೆಗಳು ಮತ್ತು ವ್ಯಾಪಾರ ಚಟುವಟಿಕೆಯ ಮೇಲ್ವಿಚಾರಣೆ ಮಾಡಲು ದೇಶದ ಕಣ್ಗಾವಲು ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಯುವ ವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದ 'ಸಿಂಧು ನೇತ್ರ' ಉಪಗ್ರಹ ( ಡಿಆರ್‌ಡಿಒ)ವನ್ನು ಭಾನುವಾರ ಬಾಹ್ಯಾಕಾಶಕ್ಕೆ ಹಾರಿದೆ.
ಇಂದು ಬೆಳಗ್ಗೆ 10:30ಕ್ಕೆ ಆಂಧ್ರದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಪಿಎಸ್‌ಎಲ್‌ವಿ-ಸಿ51 ಬಳಸಿ ಈ ಉಪಗ್ರಹ ಉಡಾಯಿಸಲಾಯಿತು.
ಸಿಂಧು ನೇತ್ರ ಉಪಗ್ರಹವನ್ನು ಡಿಆರ್‌ಡಿಒದ ಯುವ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಮತ್ತು ಐಒಆರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯುದ್ಧನೌಕೆಗಳು ಹಾಗೂ ವ್ಯಾಪಾರಿ ಹಡಗುಗಳನ್ನು ಸ್ವಯಂಚಾಲಿತವಾಗಿ ಗುರುತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಉಪಗ್ರಹವು ನೆಲದ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.